5 ವರ್ಷದಲ್ಲಿ ಅತಿ ಕಡಿಮೆ ಗಳಿಕೆ ಕಂಡ ಕಮಲ್​​ ಸಿನಿಮಾ ಥಗ್ ​​ಲೈಫ್!: 4 ದಿನಕ್ಕೆ ಗಳಿಸಿದ್ದೆಷ್ಟು..?​ | Thug Life

dk - 2025-06-09T115049.074
Published on

Thug Life: ಕಮಲ್ ಹಾಸನ್ ನಟನೆಯ ಮತ್ತು ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಚಿತ್ರವು ಮೊದಲ ವಾರಾಂತ್ಯದಲ್ಲಿ 36.52 ಕೋಟಿ ರೂ. ನಿವ್ವಳ ಗಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಕಮಲ್​ ಅವರ ಅತ್ಯಂತ ಕಡಿಮೆ ಆರಂಭಿಕ ಗಳಿಕೆಯ ಸಿನಿಮಾವಾಗಿದೆ ಎಂದು ವರದಿಯಾಗಿದೆ.

ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, ಈ ಚಿತ್ರವು ತನ್ನ ನಾಲ್ಕು ದಿನಗಳ ಆರಂಭಿಕ ವಾರಾಂತ್ಯದಲ್ಲಿ 36.52 ಕೋಟಿ ರೂ. ನಿವ್ವಳ ಗಳಿಸಿದೆ. ಆದರೆ, 'ಥಗ್ ಲೈಫ್' ಚಿತ್ರವು ತನ್ನ ಮೊದಲ ವಾರಾಂತ್ಯದಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂ. ನಿವ್ವಳ ಗಳಿಸುವಲ್ಲಿ ವಿಫಲವಾಗಿದೆ ಎಂದಿದೆ ವರದಿ.

ಥಗ್ ಲೈಫ್‌ನ ನಾಲ್ಕು ದಿನದ ಗಳಿಕೆ

ಮೊದಲ ದಿನ: 15.5 ಕೋಟಿ ರೂ., 2ನೇ ದಿನ: 7.15 ಕೋಟಿ ರೂ., 3ನೇ ದಿನ:7.75 ಕೋಟಿ ರೂ., 4ನೇ ದಿನ: 6.12 ಕೋಟಿ ರೂ., ಒಟ್ಟು: 36.52 ಕೋಟಿ ರೂ. ಕಲೆಕ್ಷನ್​​ ಆಗಿದೆ.

ಕಮಲ್ ಹಾಸನ್ ಅವರ ಚಿತ್ರಗಳ ಬಾಕ್ಸ್ ಆಫೀಸ್ ಗಳಿಕೆಯನ್ನು ಗಮನಿಸಿದರೆ, ಕಳೆದ ಐದು ವರ್ಷಗಳಲ್ಲಿ 'ಥಗ್ ಲೈಫ್' ಅವರ ಅತ್ಯಂತ ಕಡಿಮೆ ಗಳಿಕೆ ಎಂದು ಹೇಳಬಹುದು. ಪ್ರೇಕ್ಷಕರಿಂದ ಭಾರೀ ಟೀಕೆಗೆ ಗುರಿಯಾದ ಅವರ ಕೊನೆಯ ಬಿಡುಗಡೆಯಾದ 'ಇಂಡಿಯನ್ 2', ದೇಶೀಯ ಬಾಕ್ಸ್ ಆಫೀಸ್ ನಲ್ಲಿ ಮೂರು ದಿನಗಳ ಆರಂಭಿಕ ವಾರಾಂತ್ಯದಲ್ಲಿ 69.15 ಕೋಟಿ ರೂ. ನಿವ್ವಳ ಗಳಿಕೆಯಲ್ಲಿ ಯಶಸ್ವಿಯಾಗಿದೆ.

ಇನ್ನು ಇತ್ತೀಚಿಗೆ ಕಮಲ್​​ ಹಾಸನ್​ ಕನ್ನಡ ಭಾಷೆ ಬಗ್ಗೆ ವಿವಾದತ್ಮಾಕ ಹೇಳಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಕನ್ನಡಗರು, ಕನ್ನಡಿಗರಲ್ಲಿ ಸ್ವಾರಿ(ಕ್ಷಮೆ) ಕೇಳುವಂತೆ ಒತ್ತಾಯಿಸಿದ್ದರು. ಇಲ್ಲವಾದ್ರೆ ಕರ್ನಾಟಕದಲ್ಲಿ ಥಗ್​​ಲೈಪ್​​ ಸಿನಿಮಾ ಬಿಡುಗಡೆಗೆ ಸಾಧ್ಯವಿಲ್ಲ ಎಂದಿದ್ದರು. ಆದರೆ, ಈ ವಿಚಾರದಲ್ಲಿ ಮೊಂಡುತನ ಮುಂದುವರೆಸಿದ ಕಮಲ್​, ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗಾಗಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಕೋರ್ಟ್​ನಿಂದ ಕೂಡ ಮುಖಭಂಗ ಅನುಭವಿಸಿದ್ದರು. ಅರ್ಜಿ ವಿಚಾರಣೆ ಮುಂದೂಡಲಾಗಿದ್ದು, ಸದ್ಯಕ್ಕೆ ಕರ್ನಾಟಕದಲ್ಲಿ ಈ ಸಿನಿಮಾ ಬಿಡುಗಡೆಯಾಗಿಲ್ಲ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net