

ಉತ್ತರಪ್ರದೇಶ: ( Throwing Money ) ಮದುವೆ ವೇಳೆ ಕುಟುಂಬಸ್ಥರು ಕಟ್ಟದ ಮೇಲೆ ನಿಂತು 500,200,100 ರೂಪಾಯಿ ನೋಟುಗಳನ್ನು ಜನರ ಮೇಲೆ ಸುರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಸಿದ್ಧಾರ್ಥನಗರದಲ್ಲಿ ನಡೆದ ಮದುವೆ ಮೆರವಣಿಗೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಸಿದ್ಧಾರ್ಥನಗರದ ದೇವಳವ ಗ್ರಾಮದಲ್ಲಿ ನಡೆದ ಮದುವೆಯ ಸಂದರ್ಭದಲ್ಲಿ ತೆಗೆದ ವಿಡಿಯೋ. ಪ್ರಸ್ತುತ, ಈ ವೀಡಿಯೊ ಚರ್ಚೆಯ ವಿಷಯವಾಗಿದೆ. ಮದುವೆಯ ಮೆರವಣಿಗೆಯಲ್ಲಿ ಮನೆಯವರ ನೂಕು ನುಗ್ಗಲು ಇದಕ್ಕೆ ಕಾರಣವಾಗಿದ್ದು, ಸುಮಾರು ಇಪ್ಪತ್ತು ಲಕ್ಷ ರೂಪಾಯಿ ನೋಟುಗಳನ್ನು ಗಾಳಿಯಲ್ಲಿ ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಮದುವೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಮನೆಯ ಮೇಲ್ಛಾವಣಿ ಹಾಗೂ ಜೆಸಿಬಿಗಳ ಮೇಲೆ ಹತ್ತಿ ನೋಟುಗಳ ಕಟ್ಟುಗಳನ್ನು ಗಾಳಿಯಲ್ಲಿ ಎಸೆದರು. ಇದನ್ನೆಲ್ಲ ಕೆಲವರು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು ಇದೀಗ ವೈರಲ್ ಆಗಿದೆ.
ವೀಡಿಯೊದಲ್ಲಿ, ಹಲವಾರು ಜನರು ಗಾಳಿಯಲ್ಲಿ ನೋಟುಗಳನ್ನು ಎಸೆಯುತ್ತಿರುವುದನ್ನು ಕಾಣಬಹುದು. 100, 200, 500 ರೂಪಾಯಿ ನೋಟುಗಳನ್ನು ಗಾಳಿಯಲ್ಲಿ ಎಸೆಯಲಾಗಿದೆ ಎಂದು ವರದಿಯಾಗಿದೆ. ಕಟ್ಟಡದ ಮೇಲ್ಛಾವಣಿಯಲ್ಲಿ ನಿಂತು ಕರೆನ್ಸಿ ನೋಟುಗಳ ಸುರಿಮಳೆಗೈದಿದ್ದಾರೆ.. ಈ ನೋಟುಗಳನ್ನು ಸಂಗ್ರಹಿಸಲು ಹಲವರು ಮುಗಿ ಬೀಳುತ್ತಾರೆ.
ಬಡವರಿಗೆ ನೆರವಾಗಬಹುದಾಗಿತ್ತು, ಈ ಹಣವನ್ನು ಯಾವುದೇ ಸ್ವಯಂಸೇವಾ ಸಂಸ್ಥೆಗೂ ನೀಡಬಹುದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕೊನೆಗೆ ಈ ವಿಡಿಯೋ ಪೊಲೀಸರಿಗೆ ತಲುಪಿದ್ದು, ಸಿದ್ಧಾರ್ಥನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ತನಿಖೆ ಕೈಗೊಂಡಿದ್ದಾರೆ. ಯಾಕೆ ಹೀಗೆ ಮದುವೆ ಮನೆಯಲ್ಲಿ ಹಣವನ್ನು ಹೀಗೆ ಮೇಲಿನಿಂದ ಎಸೆದಿದ್ದಾರೆ ಎನ್ನುವ ಕುರಿತಾಗಿ ಮಾಹಿತಿ ಇಲ್ಲ.