

ತಮಿಳುನಾಡು: ತಮಿಳು ಚಿತ್ರರಂಗದ ಬಹುಭಾಷಾ ನಟ ಕಮಲ್ ಹಾಸನ್ ಮತ್ತು ಮಣಿರತ್ನಂ ಕಾಂಬಿನೇಷನ್ನಲ್ಲಿ ಮೂಡಿಬರಲು ಸಜ್ಜಾಗಿರುವ 'ಕೆಎಚ್ 234' ಸಿನಿಮಾಗೆ ಇದೀಗ ಕಾಲಿವುಡ್ನ ಇಬ್ಬರು ಸ್ಟಾರ್ ಕಲಾವಿದರು ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದು, ಕಮಲ್ ಅಭಿಮಾನಿಗಳು ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಗೊಂಡ 'ಕಿಂಗ್ ಆಫ್ ಕೋಥಾ' ಚಿತ್ರದ ನಟ ದುಲ್ಕರ್ ಸಲ್ಮಾನ್ ಮತ್ತು ಪ್ಯಾನ್ ಇಂಡಿಯಾ 'ಲಿಯೋ' ಚಿತ್ರದಲ್ಲಿ ಮಿಂಚಿದ ನಟಿ ತ್ರಿಶಾ ಕೃಷ್ಣನ್ ಇದೀಗ 'ಕೆಎಚ್ 234' ಚಿತ್ರದ ತಾರಾಗಣಕ್ಕೆ ಸೇರ್ಪಡೆಗೊಂಡಿದ್ದಾರೆ. ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ ಕಮಲ್ ಹಾಸನ್ ನಾಯಕನಾಗಿದ್ದು, ದುಲ್ಕರ್ ಹಾಗೂ ತ್ರಿಶಾ ಪ್ರಮುಖ ಪಾತ್ರಗಳಲ್ಲಿ ನಟಿಸಲು ಮುಂದಾಗಿದ್ದಾರೆ.
2D ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸುಧಾ ಕೊಂಗರ ನಿರ್ದೇಶಿಸಲಿರುವ 'ಸೂರ್ಯ 43'ನೇ ಚಿತ್ರದ ಪಾತ್ರವರ್ಗವನ್ನು ಸೇರಿಕೊಂಡ ದುಲ್ಕರ್ ಸಲ್ಮಾನ್, ಈ ಚಿತ್ರದಲ್ಲೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಲಿಯೋ' ನಂತರ ಅಜಿತ್ ಅವರ 'ವಿದಾಮುಯಾರ್ಚಿ'ಯಲ್ಲಿ ತ್ರಿಶಾ ಅಭಿನಯಿಸುತ್ತಿದ್ದು, ಈ ಸಿನಿಮಾ 2024 ರಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).