ಛೇ, ಇವನೆಂಥ ಅಪ್ಪ? ಹೆತ್ತ ಮಗಳನ್ನೇ ಕೊಂದು ಸಮಾಧಿ ಮಾಡಿದ ಕ್ರೂರಿ

murder
Published on

ಚಿತ್ರದುರ್ಗ: ಏನ್ನೂ ಅರಿಯದ ಹಾಲುಗಲ್ಲದ ಕಂದಮ್ಮ ತಂದೆಯಿಂದಲೇ ಕೊಲೆಯಾಗಿದ್ದಾಳೆ.

ಹೆತ್ತ ಮಗಳನ್ನೇ ಕೊಂದು ಊರ ಆಚೆ ಪಾಪಿ ತಂದೆಯೊಬ್ಬ ಸಮಾಧಿ ಮಾಡಿರುವ ಪ್ರಕರಣ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗುತ್ತಿದುರ್ಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗುತ್ತಿದುರ್ಗದ ನಿಂಗಪ್ಪ ಕೊಲೆ ಆರೋಪಿ. ಈತನಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದರೂ ಗುತ್ತಿದುರ್ಗದ ಶಶಿಕಲಾಳನ್ನು ಎರನೇ ಮದುವೆಯಾಗಿದ್ದ. 2ನೇ ಹೆಂಡತಿಗೆ ಜನಿಸಿದ ಮಗಳನ್ನೇ ಹತ್ಯೆ ಮಾಡಿದ್ದಾನೆ. 3 ವರ್ಷದ ಸಿರಿಶಾ ಅಪ್ಪನಿಂದಲೇ ಕೊಲೆಯಾದ ನತದೃಷ್ಟ ಮಗು.

ಚಿತ್ರದುರ್ಗದಲ್ಲಿ ವಾಸವಿದ್ದ ನಿಂಗಪ್ಪ, ಒಂದು ತಿಂಗಳ ಹಿಂದೆಯೇ ಸಿರಿಶಾಳನ್ನು ಹತ್ಯೆ ಮಾಡಿ ಗುತ್ತಿದುರ್ಗ ಗ್ರಾಮದ ಹೊರವಲಯದಲ್ಲಿ ಮಣ್ಣು ಮಾಡಿದ್ದ. ಮಗು ನಾಪತ್ತೆಯಾಗಿರುವ ಬಗ್ಗೆ 20 ದಿನಗಳ ಹಿಂದೆಯೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಶಶಿಕಲಾ ಪ್ರಕರಣ ದಾಖಲಿಸಿದ್ದರು. ಮಗಳನ್ನು ತಂದೆಯೇ ಸಮಾಧಿ ಮಾಡಿರುವ ಬಗ್ಗೆ ಗುತ್ತಿದುರ್ಗ ಗ್ರಾಮಸ್ಥರಿಂದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಪೊಲೀರು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net