ಬಿಸ್ಕತ್ ಆಸೆ ತೋರಿಸಿ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ!

stop mix
Published on

ಮೂರೂವರೆ ವರ್ಷದ ಪುಟಾಣಿ ಬಾಲಕಿಗೆ ಬಿಸ್ಕತ್ ಆಸೆ ತೋರಿಸಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.


ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಅಮಾಯಕ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.


ಪರಾಧಿಗೆ 21 ವರ್ಷಗಳ ಶಿಕ್ಷೆ ಮತ್ತು 50,000 ರೂ. ದಂಡವನ್ನು ಪಾವತಿಸದಿದ್ದಲ್ಲಿ, ಅಪರಾಧಿಯು ಒಂದು ವರ್ಷ ಹೆಚ್ಚುವರಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಜಿಲ್ಲೆಯ ವಿಶೇಷ ಪೋಕ್ಸೊ ನ್ಯಾಯಾಲಯ 2 ಶಿಕ್ಷೆ ವಿಧಿಸಿದೆ.


ಸೆಪ್ಟೆಂಬರ್ 26, 2021 ರಂದು, ಬಾಲಕಿಯ ತಂದೆ ತನ್ನ ಮೂರೂವರೆ ವರ್ಷದ ಮಗಳನ್ನು ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಯುವಕನೊಬ್ಬನು ಕರೆದೊಯ್ದಿದ್ದಾನೆ ಎಂದು ರಸಲ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಆರೋಪಿಯು ತನ್ನ ಮಗಳಿಗೆ ಬಿಸ್ಕತ್ ಕೊಡಿಸುತ್ತೇನೆ ಎಂದು ಆಮೀಷವೊಡ್ಡಿ ಕರೆದುಕೊಂಡು ಹೋಗಿದ್ದ. ಸ್ವಲ್ಪ ಸಮಯದ ನಂತರ ಅವರ ಮಗಳು ಸ್ಟೋರ್ ರೂಂನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.


ಪ್ರಜ್ಞೆ ಬಂದ ಮೇಲೆ ಮಗಳು ತನಗಾದ ಕಷ್ಟವನ್ನು ಹೇಳಿಕೊಂಡಳು. ಈ ಹಿನ್ನೆಲೆ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ರಸೂಲ್‌ಪುರ ಟ್ಯಾಂಕಿ ನಿವಾಸಿ ವಾಸಿಂ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ನ್ಯಾಯಾಲಯದ ನಂ.3 ವಿಶೇಷ ನ್ಯಾಯಾಲಯದ ಪೋಕ್ಸೋ ಸಂಜಯ್ ಯಾದವ್ II ರ ನ್ಯಾಯಾಲಯದಲ್ಲಿ ನಡೆದಿದ್ದು, ಬಾಲಕಿಯ ವೈದ್ಯಕೀಯ ವರದಿ ಮತ್ತು ಹೇಳಿಕೆಯ ನಂತರ, ಪ್ರಕರಣಕ್ಕೆ ಅತ್ಯಾಚಾರ ಮತ್ತು POCSO ಸೆಕ್ಷನ್‌ಗಳನ್ನು ಸೇರಿಸಲಾಯಿತು. ಈ ಸಂಬಂಧ ವಾಸಿಂ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net