

Lightning Strike: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ಹಠಾತ್ ಸಿಡಿಲು ಬಡಿತದಿಂದ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ ಎಂದು ಮಂಗಳವಾರ(ಅ. 07) ವರದಿಯಾಗಿದೆ.
ಶ್ರೀಕಾಕುಳಂ ಜಿಲ್ಲೆಯ ಮೆಲಿಯಪುಟ್ಟಿ ಮಂಡಲದ ಜಂಗಲಪಾಡು ರಾಜಯೋಗಿ ಕ್ವಾರಿಯಲ್ಲಿ ಇಂದು ಸಂಜೆ ಘಟನೆ ನಡೆದಿದೆ. ತಕ್ಷಣ ಅಧಿಕಾರಿಳು ರಕ್ಷಣಾ ಕಾರ್ಯಕೈಗೊಂಡಿದ್ದು, ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ತೆಕ್ಕಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತರನ್ನು ಬಿಹಾರದ ಶ್ರವಣ್ ಕುಮಾರ್(45), ರಾಜಸ್ಥಾನದ ಹೇಮರಾಜ್ ಇಶ್ವಜಿ ಮೇಘವಾಲ್(25) ಹಾಗೂ ಮಧ್ಯಪ್ರದೇಶದ ಪಿಂಟು (25) ಎಂದು ಗುರುತಿಸಲಾಗಿದೆ. ಇವರೆಲ್ಲಾ ವಲಸೆ ಕಾರ್ಮಿಕರಾಗಿದ್ದು ರಾಜಯೋಗಿ ಎಂಬ ಕಲ್ಲು ಗಣಿಗಾರಿನೆ ಕಂಪನಿ ನಡೆಸುತ್ತಿದ್ದ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)