ಹೆಡ್​ ಕಾನ್​ಸ್ಟೆಬಲ್​ಗೇ ಬ್ಲ್ಯಾಕ್​ಮೇಲ್​; ಮೂವರು ಮಹಿಳೆಯರ ಬಂಧನ..

Arrest
Published on

ಜೈಪುರ: ಹೆಡ್​ ಕಾನ್​ಸ್ಟೆಬಲ್​ಗೇ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆಯರ ಉಪಟಳದಿಂದ ನೊಂದು ಹೆಡ್ ​ಕಾನ್​ಸ್ಟೆಬಲ್​ ನೀಡಿದ್ದ ದೂರಿನ ಮೇರೆಗೆ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಸುಖ್​​ಪ್ರೀತ್ ಕೌರ್ ದೂರು ನೀಡಿದ ಹೆಡ್ ಕಾನ್​ಸ್ಟೆಬಲ್​. ಮೂವರು ಮಹಿಳೆಯರು ವಿಡಿಯೋವೊಂದನ್ನು ಇರಿಸಿಕೊಂಡು ಬ್ಲ್ಯಾಕ್​ಮೇಲ್ ಮಾಡುತ್ತಿದ್ದುದಲ್ಲದೆ, 4 ಲಕ್ಷ ರೂ. ನೀಡಬೇಕು ಎಂದು ಬೇಡಿಕೆ ಒಡ್ಡಿದ್ದರು ಎಂದು ಕೌರ್ ಜೈಪುರ ಕರನ್​ಪುರ ಸರ್ಕಲ್​ ಇನ್​​ಸ್ಪೆಕ್ಟರ್​ ತಿಳಿಸಿದ್ದಾರೆ.

ಕಾಣೆಯಾಗಿದ್ದ ಯುವತಿಯೊಬ್ಬಳು ತಮ್ಮ ಮನೆಯಲ್ಲಿದ್ದಾಳೆ ಎಂದು ಮಹಿಳೆಯೊಬ್ಬಳು ಕರೆ ಮಾಡಿದ್ದರಿಂದ ಅಲ್ಲಿಗೆ ಹೋಗಿದ್ದೆ. ಆಗ ಆಕೆಯೊಂದಿಗೆ ಸೇರಿಕೊಂಡ ಇನ್ನಿಬ್ಬರು ಮಹಿಳೆಯರು ಅಸಭ್ಯವಾಗಿ ವರ್ತಿಸಿ, ಅಶ್ಲೀಲವಾದ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಅದನ್ನು ಮುಂದಿಟ್ಟುಕೊಂಡು ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡುವುದಾಗಿ ಬೆದರಿಸಿ, ಆ ಮೂವರು 4 ಲಕ್ಷ ರೂ. ನೀಡುವಂತೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದರು ಎಂದು ಹೆಡ್​ ಕಾನ್​ಸ್ಟೆಬಲ್ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net