ಮಹಾಕುಂಭ ಮೇಳದಲ್ಲಿ 3ನೇ ಅಮೃತ ಸ್ನಾನ: ಹಿಂದಿನ ಘಟನೆ ಮರುಕಳಿಸದಂತೆ ಕಟ್ಟೆಚ್ಚರ, 'ಮೂರು ಹಂತದ ವ್ಯವಸ್ಥೆ' | Mahakumbh Mela

ವಿಜಯವಾಣಿ - 2025-02-03T073107.316
Published on

Mahakumbh Mela: ಇಂದು (ಫೆ.3) ಬೆಳಗ್ಗೆ 5:30ರಿಂದಲೇ ವಸಂತ ಪಂಚಮಿಯ ಹಿನ್ನೆಲೆ ಮೂರನೇ ಅಮೃತ ಸ್ನಾನದಲ್ಲಿ ಭಾಗಿಯಾಗಲು 3 ಕೋಟಿಗೂ ಅಧಿಕ ಭಕ್ತಾಧಿಗಳು ಆಗಮಿಸಲಿದ್ದು, ಸಂಗಮದಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ಈ ಹಿಂದೆ ಮೌನಿ ಅಮಾವ್ಯಾಸೆಯ ದಿನದಂದು ತ್ರಿವೇಣಿ ಸಂಗಮದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣ 30ಕ್ಕೂ ಹೆಚ್ಚು ಭಕ್ತರ ಸಾವಿಗೆ ಕಾರಣವಾಯಿತು. ಇಂತಹ ದುರಂತ, ಅಹಿತಕರ ಘಟನೆ ಮತ್ತೆ ಮರುಕಳಿಸಿದಂತೆ ಉತ್ತರ ಪ್ರದೇಶ ಸರ್ಕಾರ, ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ಇಂದು ಮೂರನೇ ಅಮೃತ ಸ್ನಾನದ ಹಿನ್ನೆಲೆ ಮೂರು ಕೋಟಿಗೂ ಅಧಿಕ ಭಕ್ತರು ಸೇರುವ ನಿರೀಕ್ಷೆಯಿಂದ ತ್ರಿವೇಣಿ ಸಂಗಮ ಸೇರಿದಂತೆ ಸುತ್ತಮುತ್ತಲಿನ ಸ್ಥಳದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

"ಪವಿತ್ರ ಕಾರ್ಯಕ್ರಮದ ಸುಗಮ ಪ್ರಕ್ರಿಯೆಗಳನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈಗಾಗಲೇ ಮೂರು ಹಂತದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ" ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ರಾಜೇಶ್ ದ್ವಿವೇದಿ ಭಾನುವಾರ (ಫೆ.02) ಭರವಸೆ ನೀಡಿದರು.

"ಇದಲ್ಲದೆ, ಕೆಲವೆಡೆ ಸ್ಥಳಗಳನ್ನು ಮುಚ್ಚಿ ಬ್ಯಾರಿಕೇಡ್ ಹಾಕಲಾಗಿದೆ. ಇಲ್ಲಿ ಮೂರು ಹಂತದ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಯಾವುದೇ ಅಹಿತಕರ ಅಥವಾ ದುರಂತ ಸಂಭವಿಸದಂತೆ ನಮ್ಮ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ನಾವು ಜನಸಂದಣಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವತ್ತ ಹೆಚ್ಚು ಗಮನ ಹರಿಸಿದ್ದೇವೆ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net