ಅಸಲಿ‌ ಚಿನ್ನ ಕದ್ದು‌ ಅದೇ ಜಾಗಕ್ಕೆ ನಕಲಿ ಬಂಗಾರ ಇಟ್ಟ ಖದೀಮರು ಅರೆಸ್ಟ್​​

thief
Published on

ಕೊಡಗು: ಅಸಲಿ‌ ಚಿನ್ನ ಕದ್ದು‌ ಅದೇ ಜಾಗಕ್ಕೆ ನಕಲಿ ಚಿನ್ನವಿಟ್ಟು ಚಿನ್ನದ ಅಂಗಡಿಗೆ ವಂಚಿಸಿದ ಮೂವರ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಡಗು ಜಿಲ್ಲೆಯ ಕುಶಾಲನಗರದ ರಥಬೀದಿಯ ಶೀತಲ್ ಜ್ಯುವೆಲರಿ ಅಂಗಡಿಯಲ್ಲಿ ಇಬ್ಬರು ಬುರ್ಖಾಧಾರಿ ಸೇರಿದಂತೆ ಮೂವರ ಚಿನ್ನ ಕದ್ದು, ಅದೇ ಜಾಗದಲ್ಲಿ ನಕಲಿ ಚಿನ್ನವಿಟ್ಟು ಖದೀಮರು ಪರಾರಿಯಾಗಿದ್ದರು.

ಕೈರುನ್(46), ಜೈರಾಭಿ(36),ಮತ್ತೊಬ್ಬ ಯುವಕ ಬಂಧಿತರು. ಆರೋಪಿಗಳು ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಪಾಮರಹಳ್ಳಿ ನಿವಾಸಿಗಳಾಗಿದ್ದಾರೆ.

ಬುರ್ಖಾ ಧರಿಸಿದ್ದ ಆರೋಪಿಗಳೊಂದಿಗೆ ಓರ್ವ ಯುವಕ ಸಹ ಇದ್ದ. ಯುವಕ ವ್ಯಾಪಾರಿಯನ್ನು ಮಾತನಾಡಿಸುತ್ತಾ ಗಮನ ಬೇರೆಡೆ ಸೆಳೆದಿದ್ದ. ಈ ವೇಳೆ ಮಹಿಳೆಯರು ಸುಮಾರು 22.4 ಗ್ರಾಂ ಚಿನ್ನವನ್ನು ಕಳ್ಳತನ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಕೊಡಗು ಪೊಲೀಸರು ತಿಂಗಳ ಬಳಿಕ ಪ್ರಕರಣವನ್ನು ಭೇದಿಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 22 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net