ಮೂರು ಅಂತಸ್ತಿನ ಕಟ್ಟಡ ಕುಸಿತ; ಇಬ್ಬರು ಸಾವು, 12 ಮಂದಿಗೆ ಗಾಯ| Building collapse

Untitled design (81)
Published on

Building collapse: ಮಧ್ಯಪ್ರದೇಶದ ಇಂದೋರ್​ನ ರಾಣಿಪುರ ಪ್ರದೇಶದಲ್ಲಿ ಸೋಮವಾರ (ಸೆ.22) ರಾತ್ರಿ ಭಾರಿ ಮಳೆಯಿಂದ ಮೂರು ಅಂತಸ್ತಿನ ಕಟ್ಟಡ ಕುಸಿದು, ಇಬ್ಬರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮೃತರನ್ನು ಅಲಿಫಾ ಮತ್ತು ಫಹೀಮ್ ಎಂದು ಗುರುತಿಸಲಾಗಿದೆ. ಕಟ್ಟಡ ಕುಸಿದಾಗ ಒಂದೇ ಕುಟುಂಬ 14 ಮಂದಿ ಅವಶೇಷಗಳಡಿ ಸಿಲುಕಿದ್ದು, ತಕ್ಷಣ ಸ್ಥಳೀಯರು, ಪೊಲೀಸರು, ರಕ್ಷಣಾ ತಂಡಗಳು ಐದು ಗಂಟೆಗಳ ಕಾರ್ಯಾಚರಣೆ ಮಾಡಿ ರಕ್ಷಿಸಿದ್ದಾರೆ.

ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಫಹೀಮ್ ಸ್ಥಳದಲ್ಲೇ ಸಾವನ್ನಪ್ಪಿದೆ, ಅಲಿಫಾ(20) ಅವರನ್ನು ಮಹಾರಾಜ ಯಶವಂತ್ ರಾವ್ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಇಂದೋರ್ ಜಿಲ್ಲಾಧಿಕಾರಿ, ಮೂರು ಅಂತಸ್ತಿನ ಕಟ್ಟಡ ಕುಸಿದು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಒಂದೇ ಕುಟುಂಬದ 14 ಸದಸ್ಯರು ಸಿಲುಕಿಕೊಂಡಿದ್ದರು. ಅವರಲ್ಲಿ 12 ಮಂದಿ ಮಹಾರಾಜ ಯಶ್ವಂತರಾವ್ ಸರ್ಕಾರಿ ಆಸ್ಪತ್ರೆಯಲ್ಲಿ (ಎಂವೈಎಚ್) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಟ್ಟಡದ ಮುಂಭಾಗವನ್ನು ಇತ್ತೀಚೆಗೆ ಪುನರ್ನಿರ್ಮಿಸಲಾಗಿತ್ತು, ಆದರೆ ಹಿಂಭಾಗವು ಹಳೆಯದಾಗಿತ್ತು. ಕಟ್ಟಡದ ಅಡಿಪಾಯದ ಸ್ಥಿತಿಯನ್ನು ನಾವು ಪರಿಶೀಲಿಸುತ್ತೇವೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕಟ್ಟಡ ಎಂಟರಿಂದ ಹತ್ತು ವರ್ಷ ಹಳೆಯದಾಗಿರಬಹುದು ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net