ಮಾಜಿ ಸಚಿವ, ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್​​​ಗೆ ಮಾತೃವಿಯೋಗ| S Suresh Kumar

Untitled design (80)
Published on

S Suresh Kumar: ಮಾಜಿ ಸಚಿವ, ಹಾಲಿ ರಾಜಾಜಿ ನಗರ ಬಿಜೆಪಿ ಶಾಸಕ ಎಸ್​.ಸುರೇಶ್​ಕುಮಾರ್​ಗೆ ಮಾತೃವಿಯೋಗ. ಬೆಂಗಳೂರಿನಲ್ಲಿ ಎಸ್​.ಸುರೇಶ್ ಕುಮಾರ್ ತಾಯಿ ಸುಶೀಲಮ್ಮ ಅವರು ವಯೋಸಹಜ ಕಾಯಿಲೆಯಿಂದ ಇಂದು ಬೆಳಗ್ಗೆ (ಸೆ.23) ನಿಧನರಾಗಿದ್ದಾರೆ.

ಈ ಕುರಿತು ಸ್ವತಃ ಫೇಸ್​ಬುಕ್​ನಲ್ಲಿ ಮಾಹಿತಿ ನೀಡಿರುವ ಶಾಸಕ ಸುರೇಶ್ ಕುಮಾರ್, ನನ್ನನ್ನು ಹೊತ್ತು, ಹೆತ್ತು ಸಾಕಿ, ತಿದ್ದಿ ತೀಡಿ ಬೆಳೆಸಿದ ನನ್ನಮ್ಮ, ಎಲ್ಲರ ಸುಶೀಲಮ್ಮ ಟೀಚರ್ ಇನ್ನಿಲ್ಲ. ಇಂದು ಬೆಳಗಿನ ಜಾವ ನನ್ನನ್ನು ಬಿಟ್ಟು ಹೊರಟು ಬಿಟ್ಟರು ಎಂದು ಬರೆದಿದ್ದಾರೆ. ಈ ಮಾತೃವಿಯೋಗದಿಂದ ಶಾಸಕರ ಕುಟುಂಬದಲ್ಲಿ ಶೋಕವನ್ನುಂಟು ಮಾಡಿದೆ.

ಶಿಕ್ಷಕಿಯಾಗಿದ್ದ ಸುಶೀಲಮ್ಮ ಅವರು ನಿವೃತ್ತಿ ಬಳಿಕ ಬೆಂಗಳೂರಿನ ಲಕ್ಷ್ಮಿ ನಾರಾಯಣ ಕೋ ಆಪರೇಟಿವ್ ಬ್ಯಾಂಕ್​ನ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಒಟ್ಟು 8 ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net