ಸಹೋದರಿಯ ಕಾರಣದಿಂದ ಅವಿವಾಹಿತರಾಗಿಯೇ ಉಳಿದ ಮೂವರು ಅಣ್ಣ-ತಮ್ಮಂದಿರು: ಮುಂದೆ ನಡೆದಿದ್ದೇ ಘನಘೋರ! | Unmarried

dk - 2025-06-26T220440.427
Published on

Unmarried: ನಮ್ಮ ದೇಶ ಎಷ್ಟೇ ಆಧುನಿಕತೆ ಮುಂದುವರಿದಿದ್ದರೂ, ಅಂತರ್ಜಾತಿ ಪ್ರೇಮ ವಿವಾಹಕ್ಕೆ ಮಾತ್ರ ಮನ್ನಣೆ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯೊಬ್ಬಳು ಅಂತರ್ಜಾತಿ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದು, ಆಕೆ ಸಹೋದರಿಂದಲೇ ತನ್ನ ಜೀವನದಲ್ಲಿ ಘೋರ ಘಟನೆ ಕಂಡಿದ್ದಾಳೆ.

ಹೌದು, ರಾಜಸ್ಥಾನದ ಜೈಪುರದ ಯುವತಿಯೊಬ್ಬಳು ಗೊವಿಂದ್​ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಗೋವಿಂದ್​ ಬೇರೆ ಜಾತಿಯ ಯುವಕನಾದ ಹಿನ್ನೆಲೆ ಆಕೆಯ ಸಹೋದರರಿಗೆ(ಹುಡುಗಿ ಕೊಟ್ಟಿಲ್ಲ) ಮದುವೆಯಾಗಿಲ್ಲ. ಇದರಿಂದ ಕೂಪಿತರಾದ ಮೂವರು ಸಹೋದರರು ಇದೇ ಜೂ.21ರಂದು ಗೋವಿಂದ್​ನನ್ನು ಕೊಲೆ ಮಾಡಿದ್ದಾರೆ.

ಅಂತರ್ಜಾತಿ ವಿವಾಹಕ್ಕೆ ಕೊಲೆ

ಸಹೋದರಿಯೂ ಅಂತರ್ಜಾತಿ ಪ್ರೇಮ ವಿವಾಹದಿಂದಾಗಿ ಈ ಮೂವರು ಸಹೋದರರಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಸಮಾಜದಲ್ಲಿ ಮಾನಹಾನಿಯಾಗುವ ಭಯದಿಂದ ಗೋವಿಂದ್​ನನ್ನು ಕಲ್ಲಿನಿಂದ ತಲೆಗೆ ಹಾಗೂ ಮುಖಕ್ಕೆ ಹೊಡೆದು ಕೊಂದು, ಯಾರಿಗೂ ತಿಳಿಯಬಾರದೆಂದು ಶವವನ್ನು ಪೊದೆಯಲ್ಲಿ ಹಾಕಿ ಪರಾರಿಯಾಗದ್ದಾರೆ.

ಇನ್ನು ಶವ ಪತ್ತೆಯಾದ ಬಳಿಕ ಮೃತದೇಹವನ್ನು ಗೋವಿಂದ್​ನದ್ದೇ ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಾಕಷ್ಟು ಪ್ರಯತ್ನದ ನಂತರ ಆರೋಪಿಗಳಾದ ಓಂ ಪ್ರಕಾಶ್ ಸೈನಿ, ಅಜಯ್ ಸೈನಿ ಮತ್ತು ರಂಜೀತ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net