

ಮುಂಬೈ: ಬಾಲಿವುಡ್ನ ಪ್ರಮುಖ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಜತೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂದು ನಟ ಅಮೀರ್ ಖಾನ್(Amir Khan) ಬಹಿರಂಗಪಡಿಸಿದ್ದಾರೆ.
ಈ ಕುರಿತು ಇತ್ತೀಚಿಗೆ ಸೌದಿ ಅರೇಬಿಯಾದಲ್ಲಿ ನಡೆದ ರೆಡ್ ಸಿ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ನಾವು ಮೂವರು ಈಗಾಗಲೇ ಈ ಕುರಿತು ಚರ್ಚೆ ಮಾಡಿದ್ದೇವೆ ಎಂದು ಅಮೀರ್ ಖಚಿತ ಪಡಿಸಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
ಶಾರುಖ್ ಮತ್ತು ಸಲ್ಮಾನ್ ಜತೆಗಿನ ಪ್ರಾಜೆಕ್ಟ್ನ ಬಗ್ಗೆ ನಿರೂಪಕರೊಬ್ಬರು ಕೇಳಿದಾಗ, ''ನಾನು, ಸಲ್ಮಾನ್ ಮತ್ತು ಶಾರುಖ್ ಮೂವರು ಸಿನಿಮಾ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ. ಅದ್ಭುತವಾಗಿರುತ್ತದೆ ಎಂದು ಮಾತನಾಡಿಕೊಂಡಿದ್ದೇವೆ. ಅಲ್ಲದೇ, ಇದರ ಬಗ್ಗೆ ಇತ್ತೀಚಿಗೆ ಕೂಡ ಮತ್ತೆ ಚರ್ಚೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸರಿಯಾದ ಕಥೆ ಸಿಕ್ಕರೆ ಚಿತ್ರ ಮಾಡುವುದಾಗಿ ಮಾತನಾಡಿಕೊಂಡಿದ್ದೇವೆ'' ಎಂದು ಹೇಳಿದ್ದಾರೆ.
ಮುಂದುವರೆಸಿ ಮಾತನಾಡಿದ ಅಮೀರ್, '' ನಾವು ಮೂವರು ಒಂದೇ ಚಿತ್ರರಂಗದಲ್ಲಿ ಬೆಳೆದವರು. ಒಟ್ಟಿಗೆ ಸೇರಿ ಸಿನಿಮಾ ಮಾಡದಿದ್ದರೆ ಹೇಗೆ ಎಂದು ಕೇಳಿಕೊಂಡಿದ್ದೇವೆ. ಮೂವರು ಇದೇ ಕ್ಷಣಕ್ಕೆ ಎದುರು ನೋಡುತ್ತಿದ್ದೇವೆ'' ಎಂದಿದ್ದಾರೆ.
ಇನ್ನು ಅಮೀರ್ ಖಾನ್ ಸಿನಿಮಾಗಳ ವಿಚಾರಕ್ಕೆ ಬರುವುದದಾರೆ, ಅಮೀರ್ ಲಾಸ್ಟ್ ಕಾಣಿಸಿಕೊಂಡ ಚಿತ್ರ ಲಾಲ್ ಸಿಂಗ್ ಚಡ್ಡಾ. ಈ ಚಿತ್ರ ಪ್ರೇಕ್ಷರರ ಮನಗೆಲ್ಲುವಲ್ಲಿ ವಿಫಲವಾಯಿತು. 2023ರ ಅಕ್ಟೋಬರ್ರಲ್ಲಿ ಹೊಸ ಸಿನಿಮಾ ಸೆಟ್ಟಿರಿದೆ. ಇತ್ತ ಸಲ್ಮಾನ್ ಸಿಕಿಂದರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಮುಂದಿನ 2025ರಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಈಗ ಸದ್ಯಕ್ಕೆ ಬಿಗ್ಬಾಸ್ ಸೀಸನ್ 18 ಕಾರ್ಯಕ್ರಮವನ್ನು ಹೊಸ್ಟ್ ಮಾಡುತ್ತಿದ್ದಾರೆ. ಅದರಂತೆ ಶಾರುಖ್ ವಿಚಾರಕ್ಕೆ ಬರುವುದಾದರೆ ಸುಜೋಯ್ ಘೋಷ್ ನಿರ್ದೇಶನದ ಕಿಂಗ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ, ಇದೇ ಸಿನಿಮಾದಲ್ಲಿ ಅವರ ಮಗಳು ಸುಹಾನ ಖಾನ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಇದೇ ಡಿ.20ರಂದು ಬಿಡುಗಡೆಯಾಗುವ ನೀರಿಕ್ಷೆ ಇದೆ ಎಂದು ಹೇಳಲಾಗಿದೆ.(ಏಜೆನ್ಸೀಸ್).