ಮೂವರು ಆರೋಪಿಗಳು ಸೆರೆ

Principal Arrest
Published on

ಬೆಂಗಳೂರು: ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದಲ್ಲಿ ನಕಲಿ ಠೇವಣಿ ಬಾಂಡ್, ನಿಶ್ಚಿತ ಠೇವಣಿ ಸೃಷ್ಟಿಸಿ 19.34 ಕೋಟಿ ರೂ. ವಂಚನೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರು ಮತ್ತು ಮೈಸೂರಿನಲ್ಲಿ ಆರೋಪಿಗಳಾದ ವಿಜಯ್ ಕಿರಣ್, ಜೆ. ಮಂಜುನಾಥ್ ಮತ್ತು ವಿ.ಸುಜಯ್ ಎಂಬುವರನ್ನು ಬಂಧಿಸಲಾಗಿದೆ. ಕೆಎಸ್‌ಸಿಸಿಎಸ್‌ಎ್ ಮಾಜಿ ಸಿಇಒ ಪಿ. ಆಶಾಲತಾ ಮತ್ತು ಈಕೆ ಪತಿ ಸೋಮಶೇಖರ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಸಿಐಡಿ ಮೂಲಗಳು ಮಾಹಿತಿ ನೀಡಿವೆ.

ಪಿ.ಆಶಾಲತಾ ಅಧಿಕಾರ ದುರ್ಬಳಕ್ಕೆ ಮಾಡಿಕೊಂಡು ಪತಿ ಮತ್ತು ಕುಟುಂಬಸ್ಥರ ಬ್ಯಾಂಕ್ ಖಾತೆಗೆ 19.34 ಕೋಟಿ ರೂ. ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದರು. ಈ ಬಗ್ಗೆ ಮಂಡಳದ ಅಧ್ಯಕ್ಷ ವಿ.ರಾಜು, ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು.

2015ರಲ್ಲಿ ಎ್ಡಿಎ/ಅಕೌಂಟೆಂಟ್ ಆಗಿದ್ದ ಪಿ.ಆಶಾಲತಾ, 2018ರಲ್ಲಿ ಉಸ್ತುವಾರಿ ಸಿಇಒ ಆಗಿ ನೇಮಕ ಮಾಡಲಾಗಿತ್ತು. ಹಣಕಾಸಿನ ವ್ಯವಹಾರಗಳ ಜವಾಬ್ದಾರಿ ವಹಿಸಲಾಗಿತ್ತು. ಈಕೆಯೇ ಲೆಕ್ಕ ಪರಿಶೋಧಕರಿಗೆ ಎಲ್ಲ ಲೆಕ್ಕ ಪತ್ರಗಳನ್ನು ಒದಗಿಸುತ್ತಿದ್ದರು. ಅಕ್ಟೋಬರ್ 9ರಂದು ಎಲ್ಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಸಹಕಾರ ಸಚಿವರು ನಡೆಸಿದ ಸಭೆಯಲ್ಲಿ ಹಗರಣ ಬೆಳಕಿಗೆ ಬಂದಿತ್ತು. ಪ್ರಶ್ನಿಸಿದಾಗ ಆಶಾಲತಾ, ಸೊಸೈಟಿಯ ಹಣವನ್ನು ಆಪೆಕ್ಸ್ ಸಹಕಾರಿ ಬ್ಯಾಂಕ್, ಬಿಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವುದಾಗಿ ಹೇಳಿದ್ದರು.

ಯಾವುದೇ ಠೇವಣಿ ಇಲ್ಲವೆಂದು ಹೇಳಿದಾಗ, ಬ್ಯಾಂಕ್ ಪಾಸ್‌ಬುಕ್ ಮನೆಯಲ್ಲಿ ಇರುವುದಾಗಿ ಸಬೂಬು ಹೇಳಿದ್ದರು. ಬಳಿಕ ನನ್ನ ಗಂಡ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ ಎಂದಿದ್ದರು. ಕೊನೆಗೆ 111 ನಿಶ್ಚಿತ ಠೇವಣಿ ಖಾತೆಗಳ ಒಟ್ಟು 19.34 ಕೋಟಿ ರೂ. ನಕಲಿ ಠೇವಣಿ ಬಾಂಡ್‌ಗಳು ಎಂಬುದು ದೃಢವಾಗಿತ್ತು. ಕೆಲವು ನಿಶ್ಚಿತ ಠೇವಣಿಗಳು ಆಶಾಲತಾ ಅವರೇ ಬರೆದಿದ್ದು, ಬ್ಯಾಂಕ್ ದೃಢೀಕರಣ ಪತ್ರಗಳನ್ನು ಖುದ್ದಾಗಿ ತಂದಿದ್ದಾರೆ. ಲೆಕ್ಕ ಪರಿಶೋಧಕರಿಗೂ ನಕಲಿ ಪ್ರಮಾಣ ಪತ್ರವನ್ನು ನೀಡಿರುತ್ತಾರೆ. 2017ರಲ್ಲಿ ಬ್ಯಾಂಕಿನ ಸ್ಥಿರ ಠೇವಣಿಗಳ ಹಣವನ್ನು ಪತಿ ಸೋಮಶೇಖರ್, ವಿಜಯ್‌ಕಿರಣ್, ಮಂಜುನಾಥ್, ಸುಜಯ್‌ಗೆ ವರ್ಗಾವಣೆ ಮಾಡಿದ್ದರು.

2017ರಿಂದ 2023ರವರೆಗೆ ಆಶಾಲತಾ ಮೂಲ ಸ್ಥಿರ ಠೇವಣಿಯನ್ನು ವರ್ಗಾಯಿಸುವಾಗ ಅಧ್ಯಕ್ಷರ ನಕಲಿ ಸಹಿ ಹಾಕಿ ದಾಖಲೆಗಳನ್ನು ಸಲ್ಲಿಸಿರುತ್ತಾರೆ. ಮೂಲ ಎ್ಡಿ ಬಾಂಡ್‌ಗಳನ್ನು ಸಲ್ಲಿಸುವಾಗ ಕವರ್ ಲೆಟರ್‌ಗಳನ್ನು ಸಹಕಾರ ೆಡರೇಷನ್‌ನಲ್ಲಿ ಇಡಬೇಕಾಗಿದ್ದು, ಅಧ್ಯಕ್ಷರು ಮತ್ತು ಸಿಇಒ ಸಹಿ ಮಾಡಬೇಕಾಗಿತ್ತು. ಆದರೆ, ಕೇವಲ ಸಿಇಒ ಒಬ್ಬರೇ ಸಹಿ ಮಾಡಿ ಎ್ಡಿ ಮೊತ್ತವನ್ನು ಆಶಾಲತಾ, ಪತಿಯ ವೈಯಕ್ತಿಕ ಖಾತೆಗೆ ಇತರ ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net