Salman khan: ಸಲ್ಮಾನ್ ಗೆ ಮತ್ತೆ ಬೆದರಿಕೆ.. 2ಕೋಟಿ ರೂ.ಕೊಟ್ರೆ ಜೀವಭಿಕ್ಷೆ!

salman khan
Published on

ಮುಂಬೈ: ಬಾಲಿವುಡ್​ ನಟ ಸಲ್ಮಾನ್ ಖಾನ್​(Salman khan) ಆಪ್ತ ಸ್ನೇಹಿತ, ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್ ಖಾನ್‌ಗೆ ಜೀವಬೆದರಿಕೆ ಹೆಚ್ಚಾಗಿದ್ದು, 2 ಕೋಟಿ ರೂ. ಕೊಟ್ಟರೆ ಜೀವ ಭಿಕ್ಷೆ ನೀಡುವುದಾಗಿ ಮತ್ತೊಂದು ಸಂದೇಶ ಬಂದಿದೆ.

ಬಾಬಾ ಸಿದ್ದಿಕಿ ಹತ್ಯೆಯ ನಂತರ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹಲವು ದರೋಡೆಕೋರರು ಸಲ್ಮಾನ್ ಖಾನ್​ ಅವರನ್ನು ಟಾರ್ಗೆಟ್ ಮಾಡಿ ಪೊಲೀಸರಿಗೆ ನಕಲಿ ಸಂದೇಶ ರವಾನಿಸಿ ಹಣ ಗಳಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದೊಂದು ಸೂಕ್ಷ್ಮ ವಿಚಾರವಾಗಿರುವುದರಿಂದ ಪೊಲೀಸರು ಕೂಡ ಈ ಸಂದೇಶಗಳ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ 5 ಕೋಟಿ ರೂ. ಕೊಟ್ಟರೆ ಬಿಟ್ಟುಬಿಡುತ್ತೇವೆ ಎಂಬ ಸಂದೇಶದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಇದನ್ನು ಜೆಮ್‌ಶೆಡ್‌ಪುರದ 24 ವರ್ಷದ ತರಕಾರಿ ವ್ಯಾಪಾರಿಯೊಬ್ಬ ಕಳುಹಿಸಿರುವುದು ದೃಢಪಟ್ಟಿತ್ತು. ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಯುವಕ ಈ ಕೆಲಸ ಮಾಡಿದ್ದನಂತೆ. ಪೊಲೀಸರು ವ್ಯಕ್ತಿಯನ್ನು ಬಂಧಿಸಿದರು. ಈಗ ಮತ್ತೆ 2 ಕೋಟಿ ರೂ.ಗೆ ಬೇಡಿಕೆ ಬರುತ್ತಿದ್ದಂತೆ ಪೊಲೀಸರು ಮತ್ತೆ ತನಿಖೆ ಚುರುಕುಗೊಳಿಸಿದ್ದಾರೆ.

ಸಂದೇಶ ಬಂದ ಬಳಿಕ ಪೊಲೀಸರು ಉತ್ತರ ಪ್ರದೇಶದ ನೋಯ್ಡಾ ಮೂಲದ 20 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಸಲ್ಮಾನ್ ಖಾನ್ ಹಾಗೂ ಶಾಸಕ ಜೀಶಾನ್ ಸಿದ್ದಿಕಿ ಅವರನ್ನು ಹತ್ಯೆ ಮಾಡುವುದಾಗಿ ಯುವಕ ವಾರ್ನಿಂಗ್ ನೀಡಿದ್ದಾನೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net