

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನಲ್ಲಿ ಭಾರತೀಯ ಸೇನೆ ಮೇಜರ್ ಜನರಲ್ ಸಮೀರ್ ಶ್ರೀವಾಸ್ತವ ನೇತೃತ್ವದಲ್ಲಿ 27 ಗಂಟೆ ಕಾರ್ಯಾಚರಣೆ ನಡೆಸಿದ್ದು, ಮೂವರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. ವಿಪರ್ವಾಸವೆಂದರೆ ಸೈನ್ಯದ ನಾಯಿ ಫ್ಯಾಂಟಮ್(Army Dog) ರಕ್ಷಣಾ ಪಡೆಗಳನ್ನು ರಕ್ಷಿಸಿ ವೀರಮರಣಹೊಂದಿದೆ.
ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡ ಮೇಜರ್ ಜನರಲ್ ಶ್ರೀವಾಸ್ತವ, ಸೋಮವಾರ ಬೆಳಗ್ಗೆ 7.20 ರ ಸುಮಾರಿಗೆ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಮತ್ತು ಅಖ್ನೂರ್ ಸೆಕ್ಟರ್‌ನ ಹಳ್ಳಿಯೊಂದರ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಅಡಗಿಕುಳಿತಿದ್ದ ಮೂವರು ಭಯೋತ್ಪಾದಕರನ್ನು 27 ಗಂಟೆಗಳ ಗುಂಡಿನ ಚಕಮಕಿಯಲ್ಲಿ ಕೊಲ್ಲಲಾಯಿತು ಎಂದು ವಿವರಿಸಿದರು.
ಫ್ಯಾಂಟಮ್ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಸೈನಿಕರನ್ನು ಬಂದೂಕುಧಾರಿಗಳಿಂದ ರಕ್ಷಿಸಿದೆ. ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಕೊಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಸಂದರ್ಭದಲ್ಲಿ, ಪ್ಯಾಂಟಮ್ ಗುಂಡಿನ ತೀವ್ರವಾದ ಗಾಯಗಳಿಂದ ಬಳಲಿ ಮೃತಪಟ್ಟತು ಎಂದು ಹೇಳಿದರು.
ಬೆಲ್ಜಿಯಂನ ಮಾಲಿನೊಯಿಸ್ ಸ್ನಿಫರ್ ಡಾಗ್, ಫ್ಯಾಂಟಮ್, ರಕ್ಷಣಾ ವಿಭಾಗದಿಂದ ಅಸಾಮಾನ್ಯ ಶೌರ್ಯಕ್ಕಾಗಿ ಪ್ರಶಂಸಿಸಲ್ಪಟ್ಟಿತ್ತು.