ಕಲ್ಯಾಣ ನಾಡಿಗೆ ಮಹಾಕಂಟಕ: ನೆರೆ ಮಹಾರಾಷ್ಟ್ರದಿಂದ ಧಾವಿಸಿದ ಸಾವಿರಾರು ಮಂದಿ

maha april
Published on

ಜಯತೀರ್ಥ ಪಾಟೀಲ ಕಲಬುರಗಿ

ಕಲ್ಯಾಣ ನಾಡಿಗೆ ಕರೊನಾ ಮಹಾಮಾರಿ ಬೆಂಬತ್ತಿ ಕಾಡುತ್ತಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದ ಮುಂಬಯಿ, ಪುಣೆ ಸೇರಿ ಅನೇಕ ನಗರಗಳು ತತ್ತರಿಸಿದ್ದು, ಸೋಂಕಿತರ ಜತೆಗೆ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಈ ಮಧ್ಯೆ ಮಹಾರಾಷ್ಟ್ರದಿಂದ ಸಾವಿರಾರು ಜನ ಜಿಲ್ಲೆಯತ್ತ ಧಾವಿಸಿರುವುದು ಆತಂಕ ಸೃಷ್ಟಿಸಿದೆ.

ಮಹಾರಾಷ್ಟ್ರದಿಂದ ಬಂದವರ ಪೈಕಿ ಇಬ್ಬರಲ್ಲಿ ಕರೊನಾ ಸೋಂಕು ದೃಢಪಟ್ಟಿರುವುದು ಭಯ ಇಮ್ಮಡಿಗೊಳಿಸಿದೆ. ಜಿಲ್ಲೆಯಲ್ಲಿ 36 ಕರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. ಆರು ಜನ ಗುಣಮುಖರಾಗಿದ್ದಾರೆ. 29 ಸಕ್ರಿಯ ಪ್ರಕರಣ ಬಾಕಿ ಇವೆ. ಈವರೆಗೆ 609 ಜನ ಪ್ರಾಥಮಿಕ ಸಂಪರ್ಕ, 2285 ದ್ವಿತೀಯ ಸಂಪರ್ಕ, ವಿದೇಶದಿಂದ ಬಂದವರು 488, ಹೋಂ ಕ್ವಾರಂಟೈನ್​ನಲ್ಲಿ 1897, ಐಸೋಲೇಷನ್ ವಾರ್ಡ್​ನಲ್ಲಿ 269, ನೆಗೆಟಿವ್ 1842, ವರದಿ ನಿರೀಕ್ಷೆಯಲ್ಲಿ 642 ಜನರಿದ್ದಾರೆ.

ಮಹಾರಾಷ್ಟ್ರದಿಂದ ಆಳಂದಕ್ಕೆ ಸಾವಿರಾರು ಜನ ಬಂದಿದ್ದಾರೆ. ಈ ಎಲ್ಲರನ್ನು ಗುರುತಿಸಿ ತಪಾಸಣೆಗೆ ಒಳಪಡಿಸಬೇಕು. ಜತೆಗೆ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಬೇಕು. ಬೇಕಾಬಿಟ್ಟಿಯಾಗಿ ಹೊರಗಡೆ ತಿರುಗಾಡಲು ಅವಕಾಶ ನೀಡಿದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ.

| ಸುಭಾಷ ಗುತ್ತೇದಾರ್ ಶಾಸಕ ಆಳಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net