

ಶಿವಮೊಗ್ಗ: ಕೋಲ್ಕತದ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಘಟನೆ ಖಂಡಿಸಿ ಐಎಂಎ ಶಿವಮೊಗ್ಗ ಘಟಕದ ಪದಾಧಿಕಾರಿಗಳು ಮೊಂಬತ್ತಿ ಬೆಳಗಿ ಪ್ರತಿಭಟಿಸಿದರು.
ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅದು ಬೇರೆಯವರಿಗೆ ಎಚ್ಚರಿಕೆ ಪಾಠವಾಗಬೇಕು. ಇನ್ನೊಬ್ಬರನ್ನು ಬದುಕಿಸುವ ವೈದ್ಯರ ಮೇಲೆ ಇಂತಹ ಬರ್ಬರ ಕೃತ್ಯ ಎಸಗಿರುವುದು ಅತ್ಯಂತ ಹೇಯಕರ. ಇಂತಹ ಘಟನೆ ಮರುಕಳಿಸಬಾರದು. ಪಶ್ಚಿಮ ಬಂಗಾಳ ಹಾಗೂ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಐಎಂಎ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ. ಸಿ.ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಡಾ. ವಿಶಾಲಾಕ್ಷಿ ಮೂಗಿ, ಕಾರ್ಯದರ್ಶಿ ಡಾ. ಆರ್.ಅರವಿಂದನ್, ಪ್ರಮುಖರಾದ ಡಾ. ಶುಭ್ರತಾ, ಡಾ. ರವೀಶ್, ಡಾ. ಅರುಣ್ ಇತರರಿದ್ದರು.