ಸಮಸ್ಯೆಗಳನ್ನು ಸೃಷ್ಟಿಸುವವರೇ ಶಾಂತಿ ಬಹುಮಾನಗಳನ್ನು ಬಯಸುತ್ತಿದ್ದಾರೆ; ಬಾಲಿವುಡ್ ನಟ ಸಲ್ಮಾನ್ ಖಾನ್ ಹೀಗೆಳಿದ್ದು ಯಾರಿಗೆ?| Salman Khan

Salman Khan
Published on

Salman Khan: ಸಮಸ್ಯೆಗಳನ್ನು ಸೃಷ್ಟಿಸುವವರೇ ಶಾಂತಿ ಬಹುಮಾನಗಳನ್ನು ಬಯಸುತ್ತಿದ್ದಾರೆ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದು, ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಆದರೆ ಸಲ್ಮಾನ್ ಖಾನ್ ಈ ರೀತಿ ಪರೋಕ್ಷವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್  ಟ್ರಂಪ್ ಕುರಿತು ವ್ಯಂಗ್ಯವಾಡಿದ್ದಾರೆ ಎಂದು ಅವರ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2ನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ಒಟ್ಟು 7 ಯುದ್ಧಗಳನ್ನು ನಿಲ್ಲಿಸಿರುವುದಾಗಿ ಪದೇ ಪದೇ ಹೇಳಿಕೊಂಡಿದ್ದಾರೆ. ಇದಕ್ಕೆ ನನಗೆ ಇಷ್ಟೊತ್ತಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕಿತ್ತು, ಆದರೆ ಯಾರೂ ನನ್ನ ಶ್ರಮವನ್ನು ಗುರುತಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಜೊತೆಗೆ ಭಾರತದ ಪ್ರಧಾನಿ ಜೊತೆ ಸ್ನೇಹ ಸಂಬಂಧ ಹದಗೆಡಲು ನೊಬೆಲ್ ವಿಷಯವೂ ಒಂದು ಕಾರಣ ಎಂಬ ಅಂಶವೂ ಇದೆ.

ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ತಾನು ನಿರೂಪಣೆ ಮಾಡ್ತಿರುವ ಬಿಗ್ ಬಾಸ್ 19 ಸೀಸನ್‌ನ ವೇದಿಕೆಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವವರು ಶಾಂತಿ ಬಹುಮಾನಗಳನ್ನು ಬಯಸುತ್ತಾರೆ, ಇದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಇದು ಟ್ರಂಪ್ ಅವರನ್ನೇ ಗುರಿಯಾಗಿಸಿ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ.

ನಟ ಸಲ್ಮಾನ್ ಖಾನ್ ಹೇಳಿದ್ದೇನು?

ಹಿಂದಿ ಬಿಗ್​ಬಾಸ್ -19 ಸ್ಪರ್ಧಿಯಾಗಿರುವ ಫರ್ಹಾನಾ ಭಟ್ ಅವರನ್ನು ಸಲ್ಮಾನ್ ಖಾನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಮಹಿಳಾ ಸ್ಪರ್ಧಿಯನ್ನು ನಿಷ್ಪ್ರಯೋಜಕ ಎಂದು ಹೇಗೆ ಹೇಳ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ. ನೀವು ಶಾಂತಿ ಸಂದೇಶ ವಾಹಕಿ ಎಂದು ನೀವು ಹೇಗೆ ಭಾವಿಸುತ್ತೀರಿ? ನೀವು ತುಂಬಾ ದುರಹಂಕಾರಿ. ನಿಮ್ಮ ಬಗ್ಗೆ ನೀವು ಏನು ಯೋಚಿಸುತ್ತೀರಿ ಎಂದು ನಿಮಗೆ ಅರ್ಥವಾಗುತ್ತಿಲ್ಲ. ಆ ಮಹಿಳೆ ನಿಷ್ಪ್ರಯೋಜಕ ಎಂದು ನೀವು ಹೇಳಬಲ್ಲಿರಾ. ನೀವು ಕೂಡ ಒಬ್ಬ ಮಹಿಳೆ ಎಂಬುದನ್ನು ನೀವು ಮರೆತಿದ್ದೀರಾ? ಈ ಜಗತ್ತಿನಲ್ಲಿ ಏನಾಗುತ್ತಿದೆ ಎಂದು ನಿಮಗೆ ಅರ್ಥವಾಗುತ್ತಿಲ್ಲ. ಬೇರೆಯವರಿಗಿಂತ ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸುವವರು ಶಾಂತಿ ಉಡುಗೊರೆಗಳನ್ನು ಬಯಸುತ್ತಾರೆ" ಎಂದು ಸಲ್ಮಾನ್ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net