'ಮಾಸ್ಕ್ ಧರಿಸಲು ನಿರಾಕರಿಸಿದ್ರೆ, ಕೋವಿಡ್ ಕೇರ್ ಸೆಂಟರ್​ಗಳಿಗೆ ಕಳುಹಿಸಿ ಸಮುದಾಯ ಸೇವೆ ಮಾಡಿಸಿ'!

Gujarat_High_court
Published on

ಅಹಮದಾಬಾದ್​: ಮಾಸ್ಕ್ ಧರಿಸುವುದಕ್ಕೆ ನಿರಾಕರಿಸುವವರನ್ನು ಯಾವುದೇ ಕೋವಿಡ್ ಕೇರ್ ಸೆಂಟರ್​ಗಳಿಗೆ ಕರೆದೊಯ್ದು ಸಮುದಾಯ ಸೇವೆ ಮಾಡಿಸಿ !

ಹೀಗೊಂದು ಆದೇಶವನ್ನು ಗುಜರಾತ್ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನೀಡಿದೆ. ಈ ಸಂಬಂಧ ನಿಯಮ ರೂಪಿಸುವಂತೆ ನಿರ್ದೇಶಿಸಿರುವ ಕೋರ್ಟ್​, ಸಂಕಷ್ಟ ಕಾಲದಲ್ಲಿದ್ದರೂ ನಿಯಮ ಉಲ್ಲಂಘಿಸುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಕೋರ್ಟ್ ಆದೇಶ ಪ್ರಕಾರ, ಮಾಸ್ಕ್ ಧರಿಸದವರಿಗೆ, ಕೋವಿಡ್ ನಿಯಮ ಉಲ್ಲಂಘಕರಿಗೆ ದಂಡ ವಿಧಿಸುವುದರ ಜತೆಗೆ ಹೆಚ್ಚುವರಿಯಾಗಿ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಕನಿಷ್ಠ 4 ರಿಂದ 5 ಗಂಟೆ ಅವಧಿಗೆ ಕನಿಷ್ಠ 5 ರಿಂದ ಗರಿಷ್ಠ 15 ದಿನಗಳ ಕಾಲ ಸಮುದಾಯ ಸೇವೆ ಮಾಡುವಂತೆ ಸೂಚಿಸಬೇಕು.

ನಿಯಮ ಉಲ್ಲಂಘಕರಿಗೆ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಸ್ವಚ್ಛತಾ ಕಾರ್ಯ, ಹೌಸ್​ಕೀಪಿಂಗ್​, ಅಡುಗೆ, ನೆರವು, ಸೋಂಕುಪೀಡಿತರ ಸೇವೆ, ರೆಕಾರ್ಡ್, ಡೇಟಾ ಸಂಗ್ರಹ ಮುಂತಾದ ಕೆಲಸಗಳನ್ನು ಕೊಡಬೇಕು. ಈ ಸಂಬಂಧ ಸರ್ಕಾರ ಸಿದ್ಧತೆ ಮಾಡಿಕೊಂಡು ಡಿಸೆಂಬರ್ 24ರೊಳಗೆ ವರದಿ ಸಲ್ಲಿಸಬೇಕು. ವಿಶಾಲ್ ಅವ್ತಾನಿ ಹೂಡಿದ್ದ ದಾವೆ ಸಂಬಂಧ ಕೋರ್ಟ್ ಈ ಆದೇಶ ನೀಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net