ವೈದ್ಯಶಿಕ್ಷಣ ಪದವೀಧರರ ಗಮನಕ್ಕೆ - ಟಿಎಚ್​ಎಸ್​ಟಿಐನಲ್ಲಿ ವೈದ್ಯಕಿಯ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದಾರೆ ನೋಡಿ..

THSTI Vidyarthi Mitra 28 MAR 20
Published on

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾದ, ಫರೀದಾಬಾದ್​ನ ಟ್ರಾನ್ಸ್​ಲೇಷನಲ್​ ಹೆಲ್ತ್​ ಸೈನ್ಸ್​ ಆ್ಯಂಡ್​ ಟೆಕ್ನಾಲಜಿ ಇನ್​ಸ್ಟಿಟ್ಯೂಟ್​ನಲ್ಲಿ (ಟಿಎಚ್​ಎಸ್​ಟಿಐ) ಸೈಂಟಿಸ್ಟ್​ ಸಿ (ಕ್ಲಿನಿಕಲ್​) ಹುದ್ದೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಎಂಬಿಬಿಎಸ್​/ ಬಿಡಿಎಸ್​ /ಬಿವಿಎಸ್​ಸಿ ಬೇಸಿಕ್​ ಪದವಿ ಜತೆಗೆ ಮೆಡಿಸಿನ್​ /ಲೈಫ್​ ಸೈನ್ಸಸ್​ ವಿಷಯದಲ್ಲಿ ಎಂಡಿ/ಪಿಎಚ್​.ಡಿ ಆಗಿರಬೇಕು. ಕ್ಲಿನಿಕಲ್​ ಎಪಿಡೆಮಿಯಾಲಜಿ/ ಡೇಟಾ ಸೈನ್ಸ್​/ ಇಮ್ಯೂನೊಲಜಿ/ಜಿನೆಟಿಕ್ಸ್​ / ಬಯಾಲಜಿ/ ಬಯೋಮೆಡಿಕಲ್​ ಇಂಜಿನಿಯರಿಂಗ್​ನಲ್ಲಿ ಕನಿಷ್ಠ ಒಂದು ವರ್ಷ ಕಾರ್ಯಾನುಭವ ಹೊಂದಿರಬೇಕು. ಸಂಶೋಧನಾ ವಿಧಾನ ಹಾಗೂ ಪ್ರಮಾಣಾತ್ಮಕ ವಿಧಾನ ತಿಳಿವಳಿಕೆ ಇರಬೇಕು.

ಗರಿಷ್ಠ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಅಂಗವಿಕಲ ಅಭ್ಯಥಿರ್ಗಳಿಗೆ 10 ವರ್ಷ ವಯೋ ಸಡಿಲಿಕೆ ಇದೆ. ಮಾಸಿಕ 1,26,276 ರೂಪಾಯಿ ವೇತನ ನಿಗದಿಪಡಿಸಲಾಗಿದೆ. ಸಾಮಾನ್ಯ, ಇಡಬ್ಲ್ಯುಎಸ್​, ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ಇರುತ್ತದೆ. ಆನ್​ಲೈನ್​ ಮೂಲಕ ಶುಲ್ಕ ಪಾವತಿಸಬೇಕು. ಎಸ್​ಸಿ, ಎಸ್​ಟಿ, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು https://bit.ly/33QQOVf ನಲ್ಲಿರುವ ಮಾಹಿತಿ ಅನುಸಾರ ಏಪ್ರಿಲ್​ 16 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ https://thsti.in  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net