

ನವದೆಹಲಿ: ಪ್ರಸಕ್ತ ಸಾಲಿನ ಅಮರನಾಥ ಯಾತ್ರೆಯನ್ನು ಸಂಪೂರ್ಣ ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಷ್ಟ್ರದಲ್ಲಿ ಕೋವಿಡ್-19 ಪಿಡುಗು ಜೋರಾಗಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳ ಹಿತದೃಷ್ಟಿಯಿಂದ ಯಾತ್ರೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಹೇಳಲಾಗುತ್ತಿದೆ.
ಅಂದಾಜು 42 ದಿನ ಕಾಲ್ನಡಿಗೆಯಲ್ಲಿ ಸಾಗುವ ಜನರು ಹಿಮಾಲಯದ ತಪ್ಪಲಿನಲ್ಲಿರುವ 3,880 ಮೀಟರ್ ಎತ್ತರದ ಪ್ರದೇಶದಲ್ಲಿ ಮಂಜಿನಿಂದ ನಿರ್ಮಾಣವಾಗಿರುವ ಲಿಂಗುವಿನ ದರ್ಶನಪಡೆದು, ಪುನೀತರಾಗುತ್ತಿದ್ದರು.
ಇದಕ್ಕೂ ಮುನ್ನ ಬಾಟಾಲ್ ಮಾರ್ಗದ ಮೂಲಕ 15 ದಿನಗಳ ಅಮರನಾಥ ಯಾತ್ರೆಗೆ ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಕೂಡ ಕರೊನಾ ವೈರಾಣು ಸೋಂಕು ಮಿತಿಮೀರಿರುವ ಪರಿಣಾಮ ಯಾತ್ರೆಯನ್ನೇ ಸಂಪೂರ್ಣ ರದ್ದುಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.