

ಹೊಸದಿಲ್ಲಿ: ಇಂದು ಅನೇಕ ಫ್ಯಾಕ್ಟರಿ, ಕಂಪನಿಗಳಲ್ಲಿ ಕೂಲಿ ಕಾರ್ಮಿಕರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ತಮ್ಮದೇ ಆದ ವಿಶೇಷ ಹಾಗೂ ವಿಶಿಷ್ಟ ಕೌಶಲ್ಯಗಳನ್ನು ಹೊಂದಿರುತ್ತಾರೆ. ಕೆಲವರು ಅತ್ಯಂತ ಸರಳವಾಗಿ, ಜಾಣ್ಮೆಯಿಂದ ಎಲ್ಲಾ ಕೆಲಸ-ಕಾರ್ಯಗಳನ್ನು ಪೂರೈಸುವ ಮುಖೇನ ತಮ್ಮ ಸಂಸ್ಥೆಯ ಮಾಲೀಕರಿಂದ ಶಭಾಷ್ ಎನಿಸಿಕೊಳ್ಳುತ್ತಾರೆ. ಬಹಳ ವೇಗವಾಗಿ, ಎಲ್ಲರ ಗಮನ ಸೆಳೆಯುವಂತೆ ಕೆಲಸ ಮಾಡುವವರ ವಿಡಿಯೋಗಳನ್ನು ನಾವೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಲೇ ಇರುತ್ತೇವೆ. ಆ ಪೈಕಿ ಇಲ್ಲೊಬ್ಬರು ಮಹಿಳೆ ಕ್ಷಣಮಾತ್ರದಲ್ಲಿ ಸೈಕಲ್‌ಗಳನ್ನು ಪ್ಯಾಕ್ ಮಾಡುವುದನ್ನು ನೀವು ನೋಡಿದ್ರೆ ಖಂಡಿತ ಆಶ್ಚರ್ಯಚಕಿತರಾಗುತ್ತೀರಿ.
ಸಾಮಾಜಿಕ ಜಾಲತಾಣದಲ್ಲಿ ಕಂಡಬರುವ ಇಂತಹ ವಿಡಿಯೋಗಳು ನೆಟ್ಟಿಗರ ಹುಬ್ಬೇರುವಂತೆ ಮಾಡುತ್ತದೆ. ಈ ವೀಡಿಯೋ ಸಹ ವಿಶ್ವಾದ್ಯಂತ ಅಪಾರ ಸಂಖ್ಯೆಯ ವೀಕ್ಷಕರಿಂದ ನೋಡಲ್ಪಟ್ಟಿದೆ ಹಾಗೂ ಮೆಚ್ಚುಗೆಯನ್ನು ಗಳಿಸಿದೆ. ಕೆಲವೇ ಸೆಕೆಂಡ್ಗಳಲ್ಲಿ ಬಹು ದೊಡ್ಡ ಸೈಕಲ್‌ಗಳನ್ನು ಪ್ಯಾಕ್ ಮಾಡುವ ಈ ಮಹಿಳೆಯ ಅಸಾಧಾರಣ ಸಾಮರ್ಥ್ಯವನ್ನು ನೋಡುಗರು ಮೆಚ್ಚಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಬಹಳ ಸಲೀಸಾಗಿ ಹಲವಾರು ಬೈಸಿಕಲ್‌ಗಳನ್ನು ಪ್ಯಾಕ್ ಮಾಡುವ ಮಹಿಳೆಯ ಕೌಶಲ್ಯ ನೋಡುಗರನ್ನು ಮತ್ತಷ್ಟು ಸೆಳೆದಿದೆ. ಕೆಲವರು ಆಕೆ ಮಾಂತ್ರಿಕಳಾ?, ಇಷ್ಟು ವೇಗವಾಗಿ ಪ್ಯಾಕ್ ಮಾಡಲು? ಎಂದರೆ, ಇನ್ನು ಕೆಲವರು ಆಶ್ಚರ್ಯ ಭಾರೀ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಶೇರ್ ಆದ ಒಂದು ದಿನದೊಳಗೆ ಬರೋಬ್ಬರಿ ಒಂದು ಕೋಟಿಗೂ ಅಧಿಕ ವೀಕ್ಷಣೆಗಳನ್ನು ಗಳಿಸಿದ್ದು, 18 ಸಾವಿರಕ್ಕೂ ಹೆಚ್ಚು ಲೈಕ್ ಪಡೆದುಕೊಂಡಿದೆ,(ಏಜೆನ್ಸೀಸ್).