ಗ್ರಾಹಕರಿಗೆ 1 ಕೆಜಿ ಟೊಮ್ಯಾಟೊ ಫ್ರೀ ಕೊಡುತ್ತಾರೆ ಈ ಟ್ಯಾಟೂ ಶಾಪ್ ಮಾಲೀಕ!; ಉಚಿತದ ಹಿಂದಿರುವ ಕಾರಣವೇನು ಗೊತ್ತಾ?

Untitled design (70)
Published on

ವಾರಣಾಸಿ: ಭಾರತದಲ್ಲಿ ಟೊಮ್ಯಾಟೊ ಬೆಲೆ ಇದೀಗ ಚಿನ್ನ-ಬೆಳ್ಳಿ ದರವನ್ನು ಮೀರಿಸುವಂತೆ ಗಗನಕ್ಕೇರಿದೆ. ದುಬಾರಿ ಟೊಮ್ಯಾಟೊ ಖರೀದಿ ಮಾಡಲು ಜನಸಾಮಾನ್ಯರು ಪರದಾಡುತ್ತಿರುವ ವೇಳೆ ಇಲ್ಲೊಬ್ಬ ಅಂಗಡಿ ಮಾಲೀಕ ತನ್ನ ಗ್ರಾಹಕರಿಗೆ 1 ಕೆಜಿ ಟೊಮ್ಯಾಟೊ ಅನ್ನು ಉಚಿತವಾಗಿ ನೀಡುತ್ತಿದ್ದಾರೆ. ಆದ್ರೆ, ಒಂದೇ ಒಂದು ಒಪ್ಪಂದದ ಮೇಲೆ ಮಾತ್ರ ಎಂಬುದು ಇದೀಗ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ವಾರಣಾಸಿಯ ಟ್ಯಾಟೂ ಅಂಗಡಿಯ ಮಾಲೀಕರೊಬ್ಬರು ಟೊಮ್ಯಾಟೊ ಬೆಲೆಯಿಂದ ಜನರು ತತ್ತರಿಸುವ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವುದು ಇದೀಗ ಎಲ್ಲರ ಗಮನಸೆಳೆದಿದೆ! ತಮ್ಮ ಅಂಗಡಿಯಲ್ಲಿ ಹಚ್ಚೆ ಹಾಕಿಸಿಕೊಂಡವರಿಗೆ ಒಂದು ಕೆಜಿ ಟೊಮ್ಯಾಟೊವನ್ನು ಉಚಿತವಾಗಿ ಇವರು ನೀಡುತ್ತಿದ್ದಾರೆ. ಈ ಆಫರ್​​ಗೆ ಸುತ್ತಮುತ್ತಲಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.

ವಾರಣಾಸಿಯ ಸಿಗ್ರಾ ಪ್ರದೇಶದಲ್ಲಿ ಹಚ್ಚೆ ಹಾಕುವ ಮಳಿಗೆಯನ್ನು ಹೊಂದಿರುವ ಮಾಲೀಕ ಅಶೋಕ್ ಗೋಗಿಯಾ, ಟೊಮ್ಯಾಟೊ ಬೆಲೆ ಏರಿಕೆಯಾಗುತ್ತಲೇ ಇರುವುದರಿಂದ ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಾಲೀಕ ಅಶೋಕ್, "ನಾವು ಸಾಮಾನ್ಯವಾಗಿ ಸಾವನ್ ತಿಂಗಳಲ್ಲಿ ಹಚ್ಚೆ ಉತ್ಸಾಹಿಗಳನ್ನು ಅಧಿಕ ಸಂಖ್ಯೆಯಲ್ಲಿ ನೋಡುತ್ತೇವೆ, ಏಕೆಂದರೆ ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಟೊಮ್ಯಾಟೊ ಬೆಲೆಯಲ್ಲಿ ಏರಿಕೆಯನ್ನು ಕಂಡಾಗ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ನನಗೆ ಇದು ಸರಿಯಾದ ಸಮಯ ಎಂದು ಅನಿಸಿತು. ಹಾಗಾಗಿ ಈ ಕೊಡುಗೆಯನ್ನು ಪರಿಚಯಿಸಲು ಯೋಚಿಸಿದೆ ಮತ್ತು ಅದು ನನಗೆ ಲಾಭಕರವಾಯಿತು ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net