ಈ ವೀರ್ಯದಾನಿ 165 ಮಕ್ಕಳ ತಂದೆ!: ಶಿಕ್ಷಕ ಅರಿ ನಗೆಲ್ ನಿಜಜೀವನದ ‘ವಿಕಿ ಡೋನರ್’

6-6851adf16aa7e
Published on

ನವದೆಹಲಿ: ಅಮೆರಿಕದ ನ್ಯೂಯಾರ್ಕ್ ನಗರದ ವ್ಯಕ್ತಿಯೊಬ್ಬ ನೂರಾರು ಮಹಿಳೆಯರಿಗೆ ವೀರ್ಯದಾನ ಮೂಲಕವೇ 165 ಮಕ್ಕಳ ತಂದೆಯಾಗಿರುವ ಆಸಕ್ತಿದಾಯಕ ಪ್ರಕರಣ ಬೆಳಕಿಗೆ ಬಂದಿದೆ. ‘ವಿಕಿ ಡೋನರ್’ ಎಂಬ ಸಿನಿಮಾದ ಪಾತ್ರದಂತೆ ನಿಜ ಜೀವನದಲ್ಲೂ ವೀರ್ಯ ದಾನ ಮಾಡುತ್ತ ಬಂದಿರುವ ಗಣಿತ ಪ್ರಾಧ್ಯಾಪಕನ ಹೆಸರು ಅರಿ ನಗೆಲ್. ಈ ಪ್ರಕ್ರಿಯೆ ಮೂಲಕ ಇತ್ತೀಚೆಗೆ 165ನೇ ಮಗುವನ್ನು ಸ್ವಾಗತಿಸಿರುವ ನಗೆಲ್, ವೀರ್ಯ ದಾನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

‘ಸ್ಪರ್ವಿುನೇಟರ್’ ಎಂದೇ ಖ್ಯಾತನಾಗಿರುವ ನಗೆಲ್, ಕಳೆದೊಂದು ದಶಕದಲ್ಲಿ ವೀರ್ಯ ಕೊಟ್ಟು ನೂರಾರು ಮಹಿಳೆಯರು ಗರ್ಭವತಿ ಯಾಗಲು ನೆರವಾಗುತ್ತಿದ್ದಾರೆ. ಸದ್ಯಕ್ಕೆ ಹಲವು ಖಂಡಗಳಲ್ಲಿ 10 ಮಹಿಳೆಯರು ತನ್ನ ವೀರ್ಯ ದಿಂದ ಗರ್ಭವತಿಯರಾಗಿದ್ದು ಮಕ್ಕಳ ನಿರೀಕ್ಷೆಯಲ್ಲಿ ದ್ದಾರೆಂದು ನ್ಯೂಯಾರ್ಕ್ ಪೋಸ್ಟ್​ಗೆ ಈಚೆಗೆ ನೀಡಿದ ಸಂದರ್ಶನದಲ್ಲಿ ನಗೆಲ್ ಬಹಿರಂಗ ಪಡಿಸಿದ್ದಾರೆ. ಈ 10 ಸ್ತಿŠೕಯರು ಅಮೆರಿಕ, ಕೆನಡಾ, ಏಷ್ಯಾ, ಆಫ್ರಿಕಾ ಮತ್ತು ಯುರೋಪ್​ನವರೆಂದು ಹೇಳಿದ್ದಾರೆ. ಪ್ರಸ್ತುತ ಕನೆಕ್ಟಿಕಟ್​ನ ಮಹಿಳೆಯೊಬ್ಬರು ನಗೆಲ್​ನ ವೀರ್ಯದ ಫಲವಾಗಿ ನಾಲ್ಕನೇ ಮಗುವಿಗೆ ಜನ್ಮವಿತ್ತ ಸಂಭ್ರಮದಲ್ಲಿದ್ದಾರೆ.

ಎಲ್ಲಿ ಎಷ್ಟು ಮಕ್ಕಳು?

ನ್ಯೂಯಾರ್ಕ್​ನಲ್ಲಿ 56, ನ್ಯೂಜೆರ್ಸಿಯಲ್ಲಿ 20 ಹಾಗೂ ಕನೆಕ್ಟಿಕಟ್​ನಲ್ಲಿ 13 ಸಹಿತ ನಗೆಲ್ ಒಟ್ಟು 165 ಮಕ್ಕಳ ತಂದೆಯಾಗಿದ್ದಾರೆ. ಸಾಮಾನ್ಯವಾಗಿ ವೀರ್ಯ ದಾನಿಗಳು ಮಕ್ಕಳಿಂದ ದೂರವಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ನಗೆಲ್ ತನ್ನ ಮಕ್ಕಳೊಂದಿಗೆ ಬಾಂಧವ್ಯವನ್ನೂ ಇಟ್ಟುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net