ಮದುವೆಯಾದ 16ನೇ ದಿನಕ್ಕೆ ಗಂಡನಿಂದ ದೂರಾದ ಖ್ಯಾತ ನಟಿ; ಮಾಜಿ ಪತಿ ಕುರಿತಾಗಿ ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ South Actress

Ester Noronha
Published on

ಮುಂಬೈ: ಭಾರತದಲ್ಲಿ ಮದುವೆ ಮತ್ತು ವೈವಾಹಿಕ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇಡೀ ವಿಶ್ವವೇ ನಮ್ಮ ಸಂಪ್ರದಾಯವನ್ನು ಗೌರವಿಸುತ್ತದೆ. ಇಂತಹ ಭಾರತೀಯ ವೈವಾಹಿಕ ವ್ಯವಸ್ಥೆ ಈಗ ಅಸ್ತವ್ಯಸ್ತವಾಗಿದ್ದು, ಪ್ರಸ್ತುತ ವಿಚ್ಛೇದನ ಸಂಸ್ಕೃತಿ ಬೆಳೆಯುತ್ತಿದೆ. ಹೆಚ್ಚಾಗಿ ಸಮಾಜದಲ್ಲಿ ಜವಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಎಲ್ಲರಿಗೂ ಮಾದರಿಯಾಗಬೇಕಾದ ಸೆಲೆಬ್ರಿಟಿಗಳು ಸಾಲಾಗಿ ವಿಚ್ಛೇದನ ಪಡೆಯುತ್ತಿರುವುದು ವಿಪರ್ಯಾಸವಾಗಿದೆ. ಸಂಗೀತ ಸಂಯೋಜಕ ಎಆರ್​ ರೆಹಮಾನ್​-ಸೈರಾ ಬಾನು, ಧನುಷ್​-ಐಶ್ವರ್ಯಾ, ಜಯಂ ರವಿ-ಆರತಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ಆಧರೆ, ಇಲ್ಲೊಬ್ಬ ಸೌತ್​ ನಟಿ (South Actress) ಮದುವೆಯಾದ 16ನೇ ದಿನಕ್ಕೆ ಗಂಡನಿಂದ ದೂರಾಗಿದ್ದು, ಈ ವಿಚಾರ ಅಚ್ಚರಿಯನ್ನುಂಟು ಮಾಡಿದೆ.

ಸೌತ್​ ಬ್ಯೂಟಿ (South Actress) ಎಸ್ತರ್​ ನೊರೊನ್ಹಾ (Ester Noronha) ಮದುವೆಯಾದ 16ನೇ ದಿನಕ್ಕೆ ಗಂಡನಿಂದ ದೂರಾಗಿದ್ದು, ಈ ವಿಚಾರ ಹಲವರಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಈ ಬಗ್ಗೆ ನಟಿ ಸ್ಪಷ್ಟನೆ ಕೂಡ ನೀಡಿದ್ದು, ತಮ್ಮ ಗಂಡನ ಕರಾಳ ಮುಖವನ್ನು ಜನತೆಯ ಮುಂದೆ ಬಿಚ್ಚಿಟ್ಟಿದ್ಧಾರೆ. ಈ ಸುದ್ದಿ ಸದ್ಯ ವೈರಲ್​ ಆಗುತ್ತಿದೆ. 

2012ರಲ್ಲಿ ಚಿತ್ರರಂಗ ಪ್ರವೇಶಿಸಿದ ಎಸ್ತರ್​ (Ester Noronha) ಕನ್ನಡ, ತೆಲುಗು ಸೇರಿದಂತೆ ಸೌತ್​ ಸಿನಿ ಇಂಡಸ್ಟ್ರಿಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. 2019ರಲ್ಲಿ ಎಸ್ತರ್​ ತಮ್ಮ ಬಹುಕಾಲದ ಗೆಳೆಯ ರ‍್ಯಾಪರ್ ನೋಯೆಲ್​ ಸೀನ್​ ಅವರನ್ನು ಮದುವೆಯಾಗಿದ್ದರು. ಆದರೆ, ಇವರ ಜೋಡಿ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲಾ ಮದುವೆಯಾದ 16ನೇ ದಿನಕ್ಕೆ ದಂಪತಿ ದೂರಾಗಿದ್ದು, 2020ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. 

Ester Noronha

ಈ ಬಗ್ಗೆ ಮಾತನಾಡಿರುವ ನಟಿ (Ester Noronha), ಮದುವೆಯಾದ 16 ದಿನಗಳಿಗೆ ಆತನ ನಿಜಬಣ್ಣ ಬಯಲಾಯಿತು. ಹೀಗಾಗಿ ಆತನಿಂದ ದೂರಾಗುವ ನಿರ್ಧಾರ ತೆಗೆದುಕೊಂಡೆ. ಅಕ್ಟೋಬರ್​ 31, 2020ರಂದು ಅಧಿಕೃತವಾಗಿ ವಿಚ್ಛೇದನ ಪಡೆದು ದೂರಾಗಿದ್ದೇವೆ ಎಂದು ನಟಿ ಎಸ್ತರ್​ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಏಪ್ರಿಲ್​ ತಿಂಗಳಲ್ಲಿ ರಿಲೀಸ್​ ಆದ ಟೆನೆಂಟ್​ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಚಿತ್ರದ ಮೂಲಕ ಗೆಲುವು ಪಡೆದಿರುವ ಎಸ್ತರ್​ ಸದ್ಯ ಸಿನಿಮಾ ಹಾಗೂ ವೆಬ್​ ಸೀರೀಸ್​ಗಳಲ್ಲಿ ಬ್ಯುಸಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net