ಮಕ್ಕಳು ಎತ್ತರವಾಗಲು ಈ ಸರಳ ಯೋಗಾಸನ ಸಹಕಾರಿ!

1149961
Published on

ನಿಲುವು ಸರಿಪಡಿಸಲು ಉಪಯುಕ್ತವಾದ 'ತಾಡಾಸನ'ವು ತಾಳೆ ಮರದಂತೆ ನೇರವಾಗಿ ನಿಲ್ಲುವ ಭಂಗಿಯಾಗಿದೆ. ಇದು ದೇಹದ ಕೀಲುಗಳಿಗೆ ಶಕ್ತಿ ಕೊಡುವ ಸರಳ ಆಸನವಾಗಿದೆ. ಬೆಳೆಯುವ ಮಕ್ಕಳಿಗೆ ಎತ್ತರವಾಗಲು ಸಹಕಾರಿ.

ಪ್ರಯೋಜನ : ಈ ಆಸನ ಮಾಡುವುದರಿಂದ ಸರಿಯಾಗಿ ನೆಟ್ಟಗೆ ನಿಲ್ಲುವ ಅಭ್ಯಾಸವಾಗುತ್ತದೆ. ದೇಹದ ಎಲ್ಲಾ ಭಾರವೂ ಎರಡೂ ಕಾಲುಗಳ ಮೇಲೆ ಸಮವಾಗಿ ಹಂಚಿಹೋಗುತ್ತದೆ. ಹಾಗಾಗಿ ಮಕ್ಕಳಿಗೆ ಎತ್ತರವಾಗಲು ಸಹಕಾರಿಯಾಗುತ್ತದೆ. ಬೆನ್ನಿನ ಹುರಿಯ ನರಗಳು ಪುನಶ್ಚೇತನಗೊಳ್ಳುತ್ತವೆ. ಉದರದ, ಕರುಳಿನ ಸ್ನಾಯುಗಳು ಬಲಗೊಳ್ಳುತ್ತವೆ.

ಅಭ್ಯಾಸ ಕ್ರಮ : ಮ್ಯಾಟಿನ ಮೇಲೆ ನಿಂತು ಕೈಗಳನ್ನು ತಿರುಗಿಸಿಕೊಂಡು, ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಎರಡೂ ಕೈಗಳನ್ನು ತಲೆಯ ಮೇಲಕ್ಕೆ ತರಬೇಕು. ಕೈಜೋಡಿಸಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ನಂತರ ಕೈಯನ್ನು ತಿರುಗಿಸಿಕೊಂಡು ಉಸಿರನ್ನು ಬಿಡುತ್ತಾ ನಿಧಾನವಾಗಿ ಕೆಳಗಿಳಿಸಬೇಕು.

ಅಧಿಕ ತೂಕದ ವ್ಯಕ್ತಿಗಳು, ಆರಂಭದಲ್ಲಿ, ಈ ಆಸನವನ್ನು ಗೋಡೆಗೆ ಒರಗಿ ಅಭ್ಯಾಸ ಮಾಡಬಹುದು. ತೀರಾ ತಲೆನೋವು, ಮಂಡಿನೋವು, ಕಡಿಮೆ ರಕ್ತದೊತ್ತಡ ಇರುವವರು ಅಭ್ಯಾಸ ಮಾಡಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net