ಈ ಶಾಲಾ ಮಕ್ಕಳಿಗೆ ಅರಿಶಿಣ ಮಿಶ್ರಿತ ಅನ್ನ ಬಿಟ್ಟರೆ ಬೇರೇನೂ ಊಟಕ್ಕಿಲ್ಲ! ಪೌಷ್ಠಿಕ ಆಹಾರ ಅಂದ್ರೆ ಇದೇನಾ?

ವಿಜಯವಾಣಿ - 2024-07-07T191548.294
Published on

ಛತ್ತೀಸ್​ಗಢ: ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಆಯಾ ರಾಜ್ಯ ಸರ್ಕಾರ ಮಧ್ಯಾಹದ ಬಿಸಿಯೂಟ ವ್ಯವಸ್ಥೆಯನ್ನು ಈ ಹಿಂದಿನಿಂದಲೂ ಪೂರೈಸುತ್ತ ಬಂದಿದೆ. ಈ ಆಹಾರದಲ್ಲಿ ಮಕ್ಕಳಿಗೆ ಪೌಷ್ಠಿಕತೆಯನ್ನು ನೀಡುವ ಮಹತ್ವದ ಗುರಿಯನ್ನು ಹೊಂದಿರುವ ಸರ್ಕಾರಗಳು, ಕೆಲವೊಮ್ಮೆ ಅಲ್ಲ ಹಲವೊಮ್ಮೆ ಅದನ್ನು ಒದಗಿಸುವಲ್ಲಿ ಎಡವುತ್ತದೆ. ಈ ಸಾಲಿಗೆ ಛತ್ತೀಸಗಢ ಸರ್ಕಾರ ಸೇರಿದೆ.

ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕಿದ್ದ ಜಿಲ್ಲಾಡಳಿತ, ಬಲರಾಮಪುರ ಜಿಲ್ಲೆಯ ಬಿಜಕುರಾದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅರಿಶಿಣ ಬೆರೆಸಿದ ಅನ್ನ ಬಿಟ್ಟರೆ ಬೇರೇನೂ ಆಹಾರವಾಗಿ ಕೊಡುತ್ತಿಲ್ಲ ಎಂಬುದನ್ನು ಗಮನಹರಿಸಿಲ್ಲ. ಇತರ ರಾಜ್ಯಗಳ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಉಪ್ಪು, ಚಪಾತಿ, ಅನ್ನ ಕೊಡಲಾಗುತ್ತಿದೆ. ಆದ್ರೆ ಇಲ್ಲಿ ಇಂತಹ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ, ಸರ್ಕಾರ ನೀಡುತ್ತಿರುವ ತರಕಾರಿಗಳು ಮತ್ತು ಬೇಳೆಕಾಳುಗಳು ಆಗಾಗ್ಗೆ ಕಾಣೆಯಾಗುತ್ತಿರುವುದು. ಇದರಿಂದ ಮಕ್ಕಳು ಪೌಷ್ಟಿಕಾಂಶದ ಊಟದಿಂದ ವಂಚಿತರಾಗುತ್ತಿದ್ದಾರೆ.

ಬಿಜಕೂರ ಪ್ರಾಥಮಿಕ ಶಾಲೆಯು 43 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನೀಡುತ್ತಿದ್ದು, ಕಳೆದ ಒಂದು ವಾರದಿಂದ ಸರಬರಾಜು ಮಾಡುತ್ತಿದ್ದ ತಂಡ ಯಾವುದೇ ತರಕಾರಿ, ಬೆಳೆ-ಕಾಳುಗಳನ್ನು ನೀಡಿಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಬೆಳೆ-ಕಾಳುಗಳ ಬದಲಿಗೆ ಅರಿಶಿನ ಮಿಶ್ರಿತ ಊಟವನ್ನು ಬಡಿಸಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಶಿಕ್ಷಣಾಧಿಕಾರಿ ದೇವೇಂದ್ರ ನಾಥ್ ಮಿಶ್ರಾ, "ಲೋಪ ಎಲ್ಲಿದೆ ಎಂಬುದನ್ನು ಪರಿಶೀಲಿಸಲು ಸಮಗ್ರ ತನಿಖೆ ನಡೆಸಲಾಗುತ್ತಿದೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದು, ಇಂದೇ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ತರಕಾರಿಯನ್ನು ಸರಿಯಾಗಿ ಪೂರೈಸಬೇಕಿದ್ದವರ ನಿರ್ಲಕ್ಷ್ಯದಿಂದ ಮಕ್ಕಳಿಗೆ ಸರಿಯಾದ ಊಟ ಸಿಕ್ಕಿಲ್ಲ ಎಂಬ ಬೇಸರ ನಮಗಿದೆ" ಎಂದಿದ್ದಾರೆ,(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net