ನೊಣಕ್ಕೂ ಟ್ರೈನಿಂಗ್; ಈ ತರಬೇತಿ ನೋಡಿ..ಅಬ್ಬಬ್ಬೋ ಇದು ಸಾಮಾನ್ಯ ವಿಚಾರ ಅಲ್ಲವೇ ಅಲ್ಲ ಎಂದ್ರು ನೆಟ್ಟಿಗರು

This Person Can Train A Fly Like A Dog Video Viral
Published on

ನವದೆಹಲಿ:  ಇತ್ತೀಚಿನ ದಿನಗಳಲ್ಲಿ ಸೋಶಿಯಲ್​​ ಮೀಡಿಯಾದಲ್ಲಿ ನಾವು ನಂಬಲು ಅಸಾಧ್ಯ ಎನ್ನುವಂತೆ ವಿಡಿಯೋಗಳು ವೈರಲ್​ ಆಗುತ್ತವೆ. ನಾಯಿ, ಬೆಕ್ಕು  ಹಾಗೂ ಕೆಲವು ಪಕ್ಷಿಗಳಿಗೆ ತರಬೇತಿ  ನೀಡವುದನ್ನು ನೀವು ಕೇಳಿರಬಹುದು. ಆದ್ರೆ ನಾವು ಇಂದು ಹೇಳುವುದನ್ನು ಕೇಳಿದ್ರೆ ಶಾಕ್​ ಆಗುತ್ತಿರ.

ನೊಣವನ್ನು ಸಾಕುಪ್ರಾಣಿಯನ್ನಾಗಿ ಮಾಡಿ ತನ್ನ ಇಚ್ಛೆಯಂತೆ ಅದಕ್ಕೆ ತರಬೇತಿ ನೀಡುತ್ತಿರುವ ವ್ಯಕ್ತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​​ ಆಗಿದೆ.

ವೀಡಿಯೊದಲ್ಲಿ ಏನಿದೆ?: ನೊಣವು ಹಾರುತ್ತಾ ವ್ಯಕ್ತಿ ಹೇಳಿದಂತೆ ಮಾಡುತ್ತಿರುವುದನ್ನು ಕಾಣಬಹುದು. ವ್ಯಕ್ತಿ ತನ್ನ ಕೈ ಬೆರಳುಗಳ ಮೂಲಕವಾಗಿ ಕೆಲವು ಸೂಚನೆ ನೀಡುತ್ತಾನೆ ಅಂತೆಯೇ ನೊಣ ಕೂಡಾ ಆತ ಹೇಳಿದಂತೆ ಕೆಲಸ ಮಾಡುವುದನ್ನು ನೀವು ನೋಡಬಹುದಾಗಿದೆ.

ಕೇವಲ 20 ಸೆಕೆಂಡ್ ಗಳ ಈ ವೀಡಿಯೋ ಇದುವರೆಗೆ 3.9 ಕೋಟಿಗೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಇದು ಅಸಮಾನ್ಯ ಟ್ಯಾಲೆಂಟ್​​, ಗುರು ಸೂಪರ್​, ನೀನು ಸಾಮಾನ್ಯ ವ್ಯಕ್ತಿ ಅಲ್ಲವೇ ಅಲ್ಲ ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net