VIDEO |ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ಅವರನ್ನು ಪ್ರಭಾವಗೊಳಿಸಿದ ಈ ವಿಡಿಯೋ ಯಾವುದು?

car parking
Published on

ವ್ಯಕ್ತಿಯೊಬ್ಬ ತನ್ನ ಕಾರನ್ನು ಮನೆಯ ಮೆಟ್ಟಿಲುಗಳ ಕೆಳಗೆ ಪಾರ್ಕಿಂಗ್​ ಮಾಡುವ ತಂತ್ರಕ್ಕೆ ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ಮನಸೋತಿದ್ದಾರೆ.

ಕಾರು ಪಾರ್ಕಿಂಗ್​ ಮಾಡುವ ತಂತ್ರದ ಸಣ್ಣ ತುಣುಕನ್ನು ನೋಡಿದ ಆಟೋ ಮೊಬೈಲ್​ ಕ್ಷೇತ್ರದ ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ಪ್ರಭಾವಿತರಾಗಿದ್ದಾರೆ.

ಕಾರು ಖರೀದಿಸುವ ಬಹುತೇಕರ ಸಮಸ್ಯೆ ಪಾರ್ಕಿಂಗ್​ ಜಾಗ. ಭಾರತೀಯರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಇದು. ಕಾರಿನಲ್ಲಿ ಪ್ರಯಾಣಿಸುವ ಮಂದಿ ಕಾರು ನಿಲ್ಲಿಸಲು ಜಾಗ ಹುಡುಕುವ ಸ್ಥಿತಿ ಎದುರಾಗಿದೆ.ಈ ವಿಡಿಯೋ ಪಾರ್ಕಿಂಗ್​ ಸಮಸ್ಯೆಗೆ ಪರಿಹಾರವನ್ನು ಸೂಚಿಸುತ್ತದೆ ಎಂದು ಆನಂದ್​ ಮಹೀಂದ್ರಾ ಅವರು ಹೇಳಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ? : ವ್ಯಕ್ತಿಯೊಬ್ಬ ತನ್ನ ಕೆಂಪು ಬಣ್ಣದ ಕಾರನ್ನು ಮನೆಯ ಮೆಟ್ಟಿಲಿನ ಕೆಳಗೆ ಇರುವ ಸ್ಥಳದಲ್ಲಿ ನಿಲುಗಡೆ ಮಾಡುವ ತಂತ್ರ ಇದೆ. ಮೊದಲೆ ಸಿದ್ಧಪಡಿಸಿದ ಲೋಹದ ಟ್ರಾಲಿ ಮೇಲೆ ಕಾರು ನಿಲ್ಲಿಸಿ ನಂತರ ಅದನ್ನು ಮೆಟ್ಟಿಲು ಕೆಳಗಿರುವ ಜಾಗಕ್ಕೆ ನೂಕುತ್ತಾನೆ. ಕಾರು ಖಾಲಿ ಸ್ಥಳದಲ್ಲಿ ನಿಲ್ಲುತ್ತದೆ.

ಈ ವಿಡಿಯೋಗೆ ಪ್ರಭಾವಿತರಾಗಿರುವ ಆನಂದ್ ಮಹೀಂದ್ರಾ ಅವರು ಕೆಲವು ಅನುಮಾನಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ. ಈ ತಂತ್ರ ನನಗೆ ಇಷ್ಟವಾಗಿದೆ. ನಮ್ಮ ಕಂಪನಿಯಲ್ಲಿ ಇದನ್ನು ಜಾರಿಗೆ ತರಲು ನಾನು ಪ್ರಯತ್ನಿಸುತ್ತೇನೆ. ನನಗೆ ಈ ತಂತ್ರದ ಬಗ್ಗೆ ಸ್ಪಷ್ಟ ಮಾಹಿತಿ ಬೇಕು ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಇದೇ ರೀತಿಯ ವಿಡಿಯೋವನ್ನು ಪಂಜಾಬ್​ ಮೂಲದವರು ಅಪ್​ಲೋಡ್​ ಮಾಡಿದ್ದರು. ಆದರೆ ಈ ವಿಡಿಯೋ ಅದಕ್ಕಿಂತ ಒಂದು ಹೆಜ್ಜೆ ಮುಂದಿದೆ. ಪಾರ್ಕಿಂಗ್​ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡುತ್ತದೆ ಎಂದು ಆನಂದ್​ ಮಹೀಂದ್ರಾ ಹೇಳಿದ್ದಾರೆ.

ಕಾರು ನಿಲ್ಲಿಸುವಂತ ತಂತ್ರದ ವಿಡಿಯೋ ತುಣುಕನ್ನು ಸಿಸಿಟಿವಿ ಹೆಸರಿನ ಟ್ವಿಟರ್​ ಹ್ಯಾಂಡಲ್​ನಿಂದ ಅಪ್​ಲೋಡ್​ ಆಗಿದೆ. ಇದಕ್ಕೆ ಸೂಪರ್​ ಸೇವರ್​ ಎಂದು ಶೀರ್ಷಿಕೆ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net