ಸೀಟಿನಲ್ಲಿ ಕೂರದೇ ಟ್ರಕ್ ಪಾರ್ಕ್​ ಮಾಡಿದ ಚಾಲಕ: ವಿಡಿಯೋ ನೋಡಿದ್ರೆ ಹುಬ್ಬೇರೋದು ಗ್ಯಾರೆಂಟಿ!​

Truck
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋ ಹರಿದಾಡುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ಜನರ ಗಮನ ಸೆಳೆಯುತ್ತವೆ. ಅವುಗಳಲ್ಲಿ ಚಾಲಕರ ಕೌಶಲ್ಯದ ವಿಡಿಯೋಗಳು ಕೂಡ ಒಂದು. ಕೆಲ ಚಾಲಕರು ವಾಹನವನ್ನು ನಿಭಾಸಿಸುವ ರೀತಿ ಜನಮನ್ನಣೆ ಗಳಿಸುತ್ತದೆ. ವಾಹನ ಚಲಾಯಿಸುವುದಷ್ಟೇ ಅಲ್ಲ, ಅದನ್ನು ಸರಿಯಾಗಿ ಪಾರ್ಕ್​ ಮಾಡುವುದು ಕೂಡ ಕೌಶಲವೇ. ಅದರಲ್ಲೂ ಡ್ರೈವರ್​ ಸೀಟಿನಲ್ಲಿ ಕುಳಿತುಕೊಳ್ಳದೇ ಭಾರಿ ವಾಹನವನ್ನು ಪಾರ್ಕ್​ ಮಾಡುವುದೆಂದರೆ ಅದು ಅಸಾಧ್ಯದ ಮಾತು. ಆದರೆ, ಈ ವಿಡಿಯೋ ನೋಡಿದರೆ, ಯಾವುದು ಅಸಾಧ್ಯವಲ್ಲ ಎಂದೆನಿಸುತ್ತದೆ.

ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಾಮೂಲಿಯಂತೆ ಡ್ರೈವರ್ ಸೀಟಿನಲ್ಲಿ ಕೂರದೇ ವಾಹನದ ಹೊರಭಾಗದಲ್ಲೇ ನಿಂತು ಬೃಹತ್​ ಟ್ರಕ್​ ಒಂದನ್ನು ನಿರಾಯಸವಾಗಿ ಪಾರ್ಕ್​ ಮಾಡಿದ್ದಾನೆ. ಟ್ರಕ್​ ಹೊರಗೆ ನಿಂತು ಒಂದು ಕೈಯಲ್ಲಿ ಸ್ಟೀರಿಂಗ್​ ಹಿಡಿದು ಫರ್ಪೆಕ್ಟ್​ ಆಗಿ ಪಾರ್ಕ್​ ಮಾಡಿದ್ದಾನೆ.

ಸದ್ಯ ಈ ವಿಡಿಯೋವನ್ನು ಬ್ಲ್ಯಾಕ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈವರೆಗೂ 4 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೆ, 1 ಲಕ್ಷ 75 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದು, 21 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್​ ಮಾಡಿದ್ದಾರೆ.

ಈ ವೈರಲ್​ ವಿಡಿಯೋಗೆ ನಿರಂತರವಾಗಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ವ್ಯಕ್ತಿಯ ಪಾರ್ಕಿಂಗ್ ಕೌಶಲ್ಯವನ್ನು ಮೆಚ್ಚುತ್ತಿದ್ದಾರೆ, ಆದರೆ ಇತರರು ಈ ವಿಡಿಯೋದಿಂದ ಅಷ್ಟೇನೂ ಪ್ರಭಾವಿತರಾಗಿಲ್ಲ. ಈ ವಿಡಿಯೋ ನೋಡಿ ನಿಮಗೆ ಏನನಿಸಿತು ಎಂಬುದನ್ನು ಕಾಮೆಂಟ್​ ಮಾಡಿ ತಿಳಿಸೋದನ್ನು ಮರೆಯಬೇಡಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net