More

    ಆಡಿಯೋ ಕೇಳಿ ನನ್ನ ಮಗಳು ಶಾಕ್​ನಲ್ಲಿದ್ದು, ರೂಂ‌ಮಿಂದ ಹೊರ ಬಂದಿಲ್ಲ: ವೈಷ್ಣವಿ ತಂದೆಯ ನೋವಿನ ಮಾತು

    ಬೆಂಗಳೂರು: ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್​ ಆದ ಬೆನ್ನಲ್ಲೇ ಸಾಕಷ್ಟು ಊಹಾಪೋಹಗಳು ಎದ್ದಿದ್ದು, ಈ ಬಗ್ಗೆ ವೈಷ್ಣವಿ ಅವರ ತಂದೆ ರವಿಕುಮಾರ್​, ದಿಗ್ವಿಜಯ ನ್ಯೂಸ್​ಗೆ ಸ್ಪಷ್ಟನೆ ನೀಡಿದ್ದಾರೆ.

    ಆಡಿಯೋ ವೈರಲ್​ ಬೆನ್ನಲ್ಲೇ ನಮಗೂ ಶಾಕ್ ಆಗಿದೆ. ನನ್ನ ಮಗಳು ಕೂಡ ಶಾಕ್​ನಲ್ಲಿದ್ದಾಳೆ. ವೈಷ್ಣವಿ ರೂಂ‌ಮಿನಿಂದ ಹೊರ ಬಂದಿಲ್ಲ ಮತ್ತು ತಿಂಡಿ ಕೂಡ ತಿಂದಿಲ್ಲ. ಅಷ್ಟಕ್ಕೂ ನಮ್ಮ ಸುತ್ತ ಏನಾಗ್ತಿದೆ ಎಂಬುದು ನಮಗೂ ಗೊತ್ತಿಲ್ಲ. ಯಾರಾದರೂ ಆಗದೇ ಇರುವವರು ಈ ರೀತಿ ಮಾಡಿದ್ದಾರಾ? ಅದು ಗೊತ್ತಿಲ್ಲ. ಸದ್ಯ ಮಗಳ ನಿರ್ಧಾರಕ್ಕೆ ನಾವು ಬದ್ಧವಾಗಿರುತ್ತೇವೆ. ಅವಳು ಏನು ತೀರ್ಮಾನ ತೆಗೆದುಕೊಳ್ಳುತ್ತಾಳೋ ಕಾದು ನೋಡುತ್ತೇವೆ. ದೇವರು ಇದ್ದಾನೆ ನೋಡೋಣ. ಸದ್ಯ ವೈಷ್ಣವಿ ಯೋಗ ಮತ್ತು ಧ್ಯಾನದಲ್ಲಿ ತೊಡಗಿಸಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.

    ಸದ್ಯ ನಡೆದಿದ್ದು ಎಂಗೇಜ್ಮೆಂಟ್ ಅಲ್ಲ, ಬೊಟ್ಟು ಇಡೋ ಶಾಸ್ತ್ರ ಮಾಡಿದ್ದೀವಿ ಅಷ್ಟೇ. ಜನವರಿ ಅಥವಾ ಫೆಬ್ರವರಿಯಲ್ಲಿ ಎಂಗೇಜ್ಮೆಂಟ್ ಮಾಡೋಕೆ ಪ್ಲ್ಯಾನ್ ಮಾಡಿದ್ವಿ. ಮಾರ್ಚ್​ನಲ್ಲಿ ಮದುವೆ ಮಾಡೋಣ ಅಂತಾ ಅಂದ್ಕೊಂಡಿದ್ವಿ. ಆದರೆ, ಈ ರೀತಿ ಆಗುತ್ತೆ ಅಂತ ಗೊತ್ತಿರಲಿಲ್ಲ. ಚಾಕೊಲೇಟ್ ಬಾಯ್ ಸಿನಿಮಾದಿಂದ ವೈಷ್ಣವಿಗೆ ವಿದ್ಯಾಭರಣ್ ಪರಿಚಯವಾಗಿತ್ತು. ಆ ಸಿನಿಮಾದಲ್ಲಿ ವಿದ್ಯಾಭರಣ್ ಹೀರೋ ಮತ್ತು ನಮ್ಮ ಮಗಳು ವೈಷ್ಣವಿ ಹೀರೋಯಿನ್. ಆದರೆ ಆ ಸಿನಿಮಾ ಸ್ಟಾಪ್ ಆಯ್ತು. ಅದಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ. ಬಳಿಕ ವಿದ್ಯಾಭರಣ್​ ಸಂಪರ್ಕ ಮಿಸ್ ಆಗಿತ್ತು. ಬಳಿಕ ನಮ್ಮನೆ ಗೃಹ ಪ್ರವೇಶಕ್ಕೆ ವಿದ್ಯಾಭರಣ್ ಕುಟುಂಬಸ್ಥರು ಬಂದಿದ್ದರು. ಅಲ್ಲಿಂದ ಎರಡು ಕುಟುಂಬದಲ್ಲಿ ಮತ್ತೆ ಸ್ನೇಹ ಸಂಬಂಧ ಶುರುವಾಯಿತು. ಎರಡು ಕುಟುಂಬಸ್ಥರು ಒಪ್ಪಿಕೊಂಡಮೇಲೆ ಬೊಟ್ಟು ಇಡೋ ಶಾಸ್ತ್ರ ಮಾಡೋಣ ಎಂದು ನಿರ್ಧರಿಸಿ ಅದನ್ನು ಮಾಡಿದ್ವಿ. ಶಾಸ್ತ್ರ ಮುಗಿಸಿದ ಸ್ವಲ್ಪ ದಿನಕ್ಕೆ ಇಷ್ಟೆಲ್ಲಾ ಆಗಿದೆ. ನಾವು ಕೂಡ ಗಂಡಿನ‌ ಬಗ್ಗೆ ಹೆಚ್ಚು ವಿಚಾರಿಸಿಲ್ಲ. ಸದ್ಯ ವೈಷ್ಣವಿ ತುಂಬಾ ಬೇಜಾರಿನಲ್ಲಿದ್ದಾಳೆ. ಮೊದಲ ಹೆಜ್ಜೆಯಲ್ಲಿ ಹಿಂಗಾಯ್ತು ಅಂತಾ ನೊಂದುಕೊಂಡಿದ್ದಾಳೆ. ವಿದ್ಯಾಭರಣ್ ಜೊತೆ ನನ್ನ ಮಗಳು ಮಾತಾನಾಡಿಲ್ಲ. ಆತ ನಮ್ಮ ಜೊತೆ ಮಾತನಾಡಿದ್ದಾನೆ ಅಷ್ಟೇ. ವಿದ್ಯಾಭರಣ್ ಮೇಲೆ ಆರೋಪ ಮಾಡಿರೋ ಹುಡುಗೀರು ನಮಗೆ ವಿಷಯ ತಿಳಿಸಬಹುದಿತ್ತು. ಅದೇನು ಇದೆಯೋ ಅದನ್ನು ನೇರವಾಗಿ ನಮ್ಮ ಹತ್ತಿರ ಹೇಳಬಹುದಿತ್ತು. ಆದರೆ, ಅವರು ಆಡಿಯೋ ರಿಲೀಸ್ ಮಾಡಿದ್ದಾರೆ. ಮುಂದೇನಾಗುತ್ತೋ ನೋಡೋಣ. ನಾವಂತೂ ನಮ್ಮ ಮಗಳ ನಿರ್ಧಾರಕ್ಕೆ ಬದ್ದವಾಗಿದ್ದೇವೆ ಎಂದು ತಂದೆ ರವಿಕುಮಾರ್​ ಅವರು ದಿಗ್ವಿಜಯ ನ್ಯೂಸ್​ಗೆ ತಿಳಿಸಿದ್ದಾರೆ.

    ಏನಿದು ವಿವಾದ?
    ಕೆಲ ದಿನಗಳ ಹಿಂದಷ್ಟೇ ಅಗ್ನಿಸಾಕ್ಷಿ (Agnisakshi) ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಅಲಿಯಾಸ್​ ಸನ್ನಿಧಿ (Sannidhi) ಅವರ ನಿಶ್ಚಿತಾರ್ಥ (Engagement) ದ ಸುದ್ದಿ ಹರಿದಾಡಿತ್ತು. ಅಲ್ಲದೆ, ಅದಕ್ಕೆ ಸಂಬಂಧಿಸಿದ ಫೋಟೋಗಳು ಸಹ ವೈರಲ್​ ಆಗಿ, ಮದುವೆ ಆಗುವುದು ಖಚಿತ ಎಂಬ ಸುದ್ದಿಯು ವೈರಲ್​ ಆಗಿತ್ತು. ಆದರೆ, ಇದೀಗ ವೈಷ್ಣವಿ ಅವರಿಗೆ ಮದುವೆಗೂ ಮುನ್ನವೇ ಮೋಸ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

    ವಿರಾಜ್ (Viraj Kannda Film) ಸಿನಿಮಾದ ನಾಯಕ ವಿದ್ಯಾಭರಣ್ (Vidyabharan K S) ಎಂಬುವರ ಜತೆ ವೈಷ್ಣವಿ ನಿಶ್ಚಿತಾರ್ಥ ನೆರವೇರಿತ್ತು. ಫೋಟೋದಲ್ಲಿ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ ಬಿದರಿ ಅವರು ಕೂಡ ಇದ್ದರು. ಫೋಟೋ ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿದ್ದ ವೈಷ್ಣವಿ, ಎಂಗೇಜ್ಮೆಂಟ್ ಆಗಿಲ್ಲ, ಹುಡುಗನ ಕಡೆಯವರು ಬಂದು ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ್ದಾರೆ ಎಂದಿದ್ದರು. ಇದೀಗ ಇದ್ದಕ್ಕಿದ್ದ ಹಾಗೇ ಇಬ್ಬರು ಹುಡುಗಿಯರು ಅಖಾಡಕ್ಕಿಳಿದಿದ್ದಾರೆ. ಆ ಹುಡುಗಿಯರಿಗೂ ಹಾಗೂ ವಿರಾಜ್​ಗೂ ಏನು ಸಂಬಂಧ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ, ವಿರಾಜ್​ ಬಗ್ಗೆ ಸಾಕಷ್ಟು ಗಂಭೀರ ಆರೋಪಗಳನ್ನು ಮಾಡಿದ್ದು, ವೈಷ್ಣವಿಗೆ ಮೋಸ ಆಗಬಾರದು ಎಂದು ಹೇಳಿದ್ದಾರೆ.

    ವೈಷ್ಣವಿ ತುಂಬಾ ಒಳ್ಳೆ ಹುಡುಗಿ. ಆಕೆಗೆ ಅವನಿಂದ ಮೋಸ ಆಗಬಾರದು. ವೈಷ್ಣವಿ ಜೀವನ ಹಾಳಾಗುವುದಕ್ಕೆ ನಾವು ಬಿಡುವುದಿಲ್ಲ. ಆಕೆ ಜತೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ಹುಡುಗ ಸರಿಯಿಲ್ಲ. ವೈಷ್ಣವಿಗೂ ಮೊದಲೇ ಆತ ಐದಾರು ಜನ ಹುಡುಗಿಯರ ಜತೆ ರಿಲೇಷನ್​ಶಿಪ್​ನಲ್ಲಿದ್ದ. ಅಲ್ಲದೆ, ಹುಡುಗಿಯರನ್ನು ಮನೆಗೂ ಸಹ ಕರೆದುಕೊಂಡು ಹೋಗುತ್ತಿದ್ದ. ಆತನ ಕೃತ್ಯಕ್ಕೆ ಅವರ ತಂದೆ-ತಾಯಿಯ ಫುಲ್ ಸಪೋರ್ಟ್ ಇದೆ ಎಂದು ಇಬ್ಬರು ಅನಾಮಧೇಯ ಹುಡುಗಿಯರು ಆರೋಪ ಮಾಡಿದ್ದಾರೆ,

    ಮಾತು ಮುಂದುವರಿಸಿರುವ ಹುಡುಗಿಯರು ಈಗ ನೋಡಿಡಿದರೆ ವೈಷ್ಣವಿ ಅವರ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡಿದ್ದಾನೆ. ತಾನು 150 ಕೋಟಿಗೆ ಬಾಳುತ್ತೇನೆ ಅಂತಾ ಹೇಳಿದ್ದಾರೆ. ಹೀಗಿರುವಾಗ ಅಷ್ಟು ಸಿಂಪಲ್‌ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದೇಕೆ? ವೈಷ್ಣವಿಗೆ ಹಾಗೂ ಅವರ ಕುಟುಂಬಕ್ಕೆ ಈ ವಿದ್ಯಾಭರಣ ಎಂತವನು ಅಂತ ಇನ್ನೂ ಗೊತ್ತಿಲ್ಲ ಅನ್ಸುತ್ತೆ! ಒಂದು ವೇಳೆ ಗೊತ್ತಾದರೆ ವೈಷ್ಣವಿ ಉಗಿದು ಉಪ್ಪಿನಕಾಯಿ ಹಾಕ್ತಾರೆ. ಯಾವುದೇ ಕಾರಣಕ್ಕೂ ವೈಷ್ಣವಿ, ವಿದ್ಯಾಭರಣ್ ಮದುವೆ ಆಗಬಾರದು. ಒಂದ್ವೇಳೆ ಅವರಿಬ್ಬರು ಮದುವೆ ಆದರೆ, ಮೂರು ವರ್ಷವೂ ಸಂಸಾರ ಮಾಡಲ್ಲ. ಯಾವುದೇ ಕಾರಣಕ್ಕೂ ವಿರಾಜ್, ವೈಷ್ಣವಿ ಗೌಡ ಅವರನ್ನು ಬಾಳಸಲ್ಲ. ಅವರಿಬ್ಬರು ಡೈವೋರ್ಸ್ ತೆಗೆಕೊಳ್ಳೋದು ಗ್ಯಾರಂಟಿ ಎಂದಿದ್ದಾರೆ.

    ಮುಂದೆಂದೋ ಅವರ ಲೈಫ್ ಹಾಳಾಗುವ ಬದಲು ಈಗಲೇ ಮದುವೆ ನಿಂತು ಹೋಗಲಿ. ನಟಿ ವೈಷ್ಣವಿ ಗೌಡ (Vaishnavi Gowda) ಬದುಕು ಅಲ್ಲೋಲ-ಕಲ್ಲೋಲ ಆಗಬಾರದು. ನಾವು ಇಷ್ಟು ಹೇಳಿದ ಮೇಲೂ ಕೂಡ ವೈಷ್ಣವಿ ಹಾಗೂ ಅವರ ಕುಟುಂಬಸ್ಥರು ವಿದ್ಯಾಭರಣ್​ (Vidyabharan K S) ಕಡೆ ಮಾತನಾಡಿದರೆ ನಾವು ತಾನೇ ಏನು ಮಾಡುವುದಕ್ಕೆ ಆಗುತ್ತೆ? ಯಾರಾದರೂ ಹಾಳಾಗಿ ಹೋಗಲಿ ಅಂತ ಸುಮ್ಮನಾಗುತ್ತೇವೆ ಎಂದು ಆ ಇಬ್ಬರು ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ. ಆದರೆ, ಇದರಲ್ಲಿ ಎಷ್ಟು ಸತ್ಯ? ಎಷ್ಟು ಮಿತ್ಯ? ಎಂಬುದೇ ಇದೀಗ ಕಾಡುತ್ತಿರುವ ದೊಡ್ಡ ಪ್ರಶ್ನೆ.

    ಆಡಿಯೋ ಬೆನ್ನಲ್ಲೇ ವೈಷ್ಣವಿ ಇನ್​ಸ್ಟಾ ಸ್ಟೋರಿ
    ಈ ವಿವಾದದ ಬೆನ್ನಲ್ಲೇ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ನಿಶ್ಚಿತಾರ್ಥ ಮುರಿದುಕೊಂಡಿರುವ ಬಗ್ಗೆ ವೈಷ್ಣವಿ ಗೌಡ ತಿಳಿಸಿದ್ದಾರೆ. ಅಲ್ಲದೆ. ಈ ವಿಚಾರವನ್ನು ಮತ್ತಷ್ಟು ಎಳೆಯಬೇಡಿ ಎಂದು ಮಾಧ್ಯಮಗಳ ಬಳಿ ಮನವಿ ಮಾಡಿದ್ದಾರೆ.

    ಆರೋಪ ತಳ್ಳಿಹಾಕಿದ ವಿದ್ಯಾಭರಣ್​
    ಇತ್ತ ಹುಡುಗಿಯರಿಬ್ಬರ ಆರೋಪವನ್ನು ತಳ್ಳಿ ಹಾಕಿರುವ ವಿದ್ಯಾಭರಣ್​, ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದು, ಕಾನೂನು ರೀತಿಯಲ್ಲಿ ಹೋರಾಡುವುದಾಗಿ ಸ್ಪಷ್ಟನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಪ್ತಪದಿ ತುಳಿಯೋ ಮುನ್ನವೇ ಸನ್ನಿಧಿಗೆ ಮೋಸ? ಈ ಸಂಗತಿ ಗೊತ್ತಾದ್ರೆ ವೈಷ್ಣವಿಗೆ ಉಗಿದು ಉಪ್ಪಿನಕಾಯಿ ಹಾಕ್ತಾರಂತೆ!

    ಹುಡುಗಿಯರಿಬ್ಬರ ಆಡಿಯೋ ವೈರಲ್​ ಆದ ಬೆನ್ನಲ್ಲೇ ಸಂಬಂಧಕ್ಕೆ ಅಂತ್ಯವಾಡಿದ ಸನ್ನಿಧಿ! ವೈಷ್ಣವಿ ಮಾಡಿದ ಮನವಿ ಹೀಗಿದೆ…

    ಆಲಿಯಾ-ರಣಬೀರ್​ ಮಗಳ ಹೆಸರು ಬಹಿರಂಗ: “ರಹಾ” ಹೆಸರಿನಲ್ಲಿರುವ ಅನೇಕ ಅರ್ಥಗಳು ಹೀಗಿವೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts