ಮೂರನೇ ವ್ಯಕ್ತಿಯನ್ನು ನಿವೇದಿತಾ ಜತೆ ಸೇರಿಸಿ ಸಂಬಂಧ ಕಲ್ಪಿಸುವುದು ಶೋಭೆ ತರಲ್ಲ: ಚಂದನ್ ಶೆಟ್ಟಿ

Untitled design (88)
Published on

ಬೆಂಗಳೂರು: ಇಂದು ಬೆಂಗಳೂರಿನ ಎಂಎಂಬಿ ಲೆಗೆಸಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಚಂದನ್ ಮತ್ತು ನಿವೇದಿತಾ ಜೋಡಿ, ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಆಗಾಗ್ಗೆ ಇಬ್ಬರ ಮನಸ್ತಾಪ ಬರುತ್ತಿತ್ತು. ಹಲವಾರು ಬಾರಿ ಒಟ್ಟಿಗೆ ಇರಲು ಪ್ರಯತ್ನ ಮಾಡಿದೆವು. ಆದರೆ, ಅದು ಆಗಲಿಲ್ಲ. ಈ ಕಾರಣದಿಂದ ನಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಕಾನೂನಿನ ಚೌಕಟ್ಟಿನಲ್ಲಿ ವಿಚ್ಛೇದನ ಪಡೆದೆವು ಎಂದರು.

ನಿವೇದಿತಾ ಬಳಿಕ ಮಾತನಾಡಿದ ಚಂದನ್ ಶೆಟ್ಟಿ, ನಾನು ಮಕ್ಕಳಿಗಾಗಿ ಪೋರ್ಸ್ ಮಾಡ್ತಿದ್ದೇ, ನಿವೇದಿತಾ ಮಕ್ಕಳು ಬೇಡ ಅಂದಿದ್ದು ಎಂಬ ವಿಚಾರ ಸುಳ್ಳು. ನನಗೂ ಇನ್ನು ಪ್ಲ್ಯಾನ್ ಇದೆ. ನಿವೇದಿತಾ ಚೆನ್ನಾಗಿ ದುಡೀತಿದ್ದಾರೆ. ಯಾರ ಮೇಲೂ ಸಹ ಅವರು ಡಿಪೆಂಡೆಂಟ್ ಆಗಿಲ್ಲ. ಮೂರನೇ ವ್ಯಕ್ತಿಯನ್ನು ಅವರೊಂದಿಗೆ ಸೇರಿಸಿ ಸಂಬಂಧ ಕಲ್ಪಿಸುತ್ತಿದ್ದಾರೆ. ಇದು ಶೋಭೆ ತರುವಂತದಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net