

ಬೆಂಗಳೂರು: ದಿವಂಗತ ನಟ ಇರ್ಫಾನ್ ಖಾನ್ ಅವರ ಪತ್ನಿ ಸುತಾಪಾ ಸಿಕ್ದರ್ ಇತ್ತೀಚೆಗೆ 'ಇರ್ಫಾನ್ ಖಾನ್: ಎ ಲೈಫ್ ಇನ್ ಮೂವೀಸ್' ಪುಸ್ತಕವನ್ನು ಬಿಡುಗಡೆ ಮಾಡಿದರು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ಸುತಾಪ ಇರ್ಫಾನ್‌ಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹಂಚಿಕೊಂಡರು. 'ಪಿಕು' ಚಿತ್ರೀಕರಣದ ಸಮಯದಲ್ಲಿ ಅಮಿತಾಬ್ ಬಚ್ಚನ್ ಇರ್ಫಾನ್ ಖಾನ್ ಮೇಲೆ ಕೋಪಗೊಂಡಿದ್ದನ್ನು ಸಹ ಸುತಾಪ ಬಹಿರಂಗಪಡಿಸಿದರು. ಇದೀಗ ಸುತಾಪನ ಮಾತು ಕೇಳಿ ಎಲ್ಲರೂ ಬೆರಗಾಗಿದ್ದಾರೆ.
ಹೌದು, 'ಇರ್ಫಾನ್ ನಿರ್ದೇಶಕರು ಮತ್ತು ಬರಹಗಾರರೊಂದಿಗೆ ಕೆಲಸ ಮಾಡುತ್ತಿದ್ದರು. ಅನೇಕ ಡ್ರಾಫ್ಟ್ಗಳನ್ನು ಸಹ ಹೊಂದಿರುತ್ತಿದ್ದರು. ಸ್ಟೇಜ್ಗೆ ಹೋದಾಗ ಅವುಗಳನ್ನು ಸಾಕಷ್ಟು ಪರಿಷ್ಕರಿಸುತ್ತಿದ್ದರು. ಆದರೆ ಅವರು ಲೈಮ್ ಲೈಟ್ಗೆ ಬರಲು ಹೀಗೆ ಮಾಡುತ್ತಿರಲಿಲ್ಲ. ಭಾಷೆ ಸುಧಾರಿಸಲು ಹೀಗೆ ಮಾಡುತ್ತಿದ್ದರು' ಎಂದು ಸುತಾಪ ಹೇಳಿದರು.
ಪ್ರಸಿದ್ಧ ಬರಹಗಾರರೂ ಆಗಿರುವ ಸುತಾಪ, ಪಿಕು ಚಿತ್ರವನ್ನು ನಿರ್ದೇಶಿಸಿದ ನಿರ್ದೇಶಕ ಶೂಜಿತ್ ಸರ್ಕಾರ್ ಅವರೊಂದಿಗೆ ಸಂಭಾಷಣೆ ನಡೆಸಿದ್ದನ್ನು ನೆನಪಿಸಿಕೊಂಡರು. ಶೂಜಿತ್ ಸುತಾಪಗೆ ಹೇಳಿದರು 'ಬಚ್ಚನ್ ಸಾಹೇಬರು ಸೆಟ್‌ಗೆ ಬಂದಾಗ ಸಂಪೂರ್ಣ ತಯಾರಿಯೊಂದಿಗೆ ಬರುತ್ತಿದ್ದರು. ಆದರೆ ಇರ್ಫಾನ್ ಸಂಭಾಷಣೆ ಮಾರ್ಪಡು ಮಾಡಿದಾಗ ಅಮಿತಾಬ್ ಅವರು ಕೋಪಗೊಂಡರು. ಆದರೆ ನಂತರ ಇಬ್ಬರೂ ಒಳ್ಳೆಯ ಸ್ನೇಹಿತರಾದರು. 'ಪಿಕು' ನ ಮಧ್ಯಂತರದ ಸಂಪೂರ್ಣ ದೃಶ್ಯವನ್ನು ಸುಧಾರಿಸಲಾಗಿದೆ ಎಂದು ಸುತಾಪ ರಿವೀಲ್ ಮಾಡಿದರು.
ಇರ್ಫಾನ್ ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ಪ್ರೀತಿಪಾತ್ರರು ಯಾವಾಗಲೂ ಅವರನ್ನು ನೆನಪಿಸಿಕೊಳ್ಳುತ್ತಾರೆ. ಇರ್ಫಾನ್ ಬಾಲಿವುಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಆರ್ಟ್ ಮತ್ತು ಕಮರ್ಷಿಯಲ್ ಎರಡೂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನ್ಯೂರೋಎಂಡೋಕ್ರೈನ್ ಟ್ಯೂಮರ್‌ನೊಂದಿಗೆ ಹೋರಾಡುತ್ತಿದ್ದ ಇರ್ಫಾನ್ ಖಾನ್ 2020 ರಲ್ಲಿ ನಿಧನರಾದರು. ಅವರಿಗೆ 2018 ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ ಅವರು ಭಾರತದಿಂದ 2 ವರ್ಷಗಳ ಕಾಲ ವಿದೇಶದಲ್ಲಿ ಚಿಕಿತ್ಸೆ ಪಡೆದರು. ಆದರೂ ಅವರ ಆರೋಗ್ಯವು ಹದಗೆಟ್ಟ ಪರಿಣಾಮ ಏಪ್ರಿಲ್ 29, 2020 ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು.