

Elf owl:ಜಗತ್ತಿನ ಅತ್ಯಂತ ಚಿಕ್ಕ ಗೂಬೆ ಎಂದು ಹೆಸರುವಾಸಿಯಾಗಿರುವ ಎಲ್ಫ್ ಗೂಬೆ(Elf owl) ಬಗ್ಗೆ ಎಂದಾದರೂ ಕೇಳಿದ್ದಿರಾ ಅಥವಾ ನೋಡಿರುವಿರಾ.. ನೋಡಿಲ್ಲ ಎಂದಾದರೆ ಇದರ ಬಗ್ಗೆ ಕೊಂಚ ಮಾಹಿತಿ ತಿಳಿಯೋಣ ಬನ್ನಿ..
ಎಲ್ಫ್ ಗೂಬೆ 12ರಿಂದ 14 ಸೆ.ಮೀ ಉದ್ದವಿದ್ದು, ಕೇಲವ 35 ಗ್ರಾಂಗಳ ತೂಕವನ್ನು ಹೊಂದಿದೆ. ಅಲ್ಲದೆ, ನೈರುತ್ಯ ಯುನೆಟೇಡ್ ಸ್ಟೇಟ್ಸ್ ಮತ್ತು ಮೆಕ್ಸಿಕೋ ಮರುಭೂಮಿಗಳಲ್ಲಿ ಬದುಕು ವಿಶೇಷ ಜಾತಿ ಗೂಬೆ ಇದಾಗಿದೆ. ಇದು ಪರವಾಲಂಬಿ ಆಗಿದ್ದು, ವಿವಿಧ ಕೀಟ ಸಣ್ಣ ಸಸ್ತನಿ ಮತ್ತು ಸರಿ ಸೃಪಗಳನ್ನು ಬೇಟೆಯಾಡುತ್ತದೆ. ಅಲ್ಲದೆ, ಸಾಮಾನ್ಯ ಗೂಬೆಗಳಂತೆ ಗೂಡು ಕಟ್ಟುವುದಿಲ್ಲ. ವಿಶೇಷ ಗೂಡು ಕಟ್ಟುವ ಹೆಸರಿಗೆ ಎಲ್ಫ್ ಗೂಬೆ ಹೆಸರುವಾಸಿಯಾಗಿದೆ.
ಮೊದಲೇ ಹೇಳಿದಂತೆ ಎಲ್ಫ್ ಗೂಬೆ 12ರಿಂದ 14 ಸೆ.ಮೀ ಉದ್ದವಿದ್ದು, ಸಾಮಾನ್ಯ ಗೂಬೆಗಳಿಗಿಂತ ತುಂಬಾ ಚಿಕ್ಕದಾಗಿದೆ. ಅಂದಾಜು 35ರಿಂದ55 ಗ್ರಾಂ ತೂಕ ಹೊಂದಿರುತ್ತದೆ. ಮನೆಯಲ್ಲಿರುವ ಟೆನ್ನಿಸ್ ಬಾಲ್ಗಿಂತ ಇದರ ತೂಕ ಹಗುರವಾಗಿದೆ. ಇದರ ಮೈ ಬೂದು ಬಣ್ಣದಿಂದ ಕೂಡಿದ್ದು, ದೊಡ್ಡದಾದ ಹಳದಿ ಕಣ್ಣುಗಳನ್ನು ಹೊಂದಿದೆ. ವಿಶೇಷ ಸಣ್ಣ ಮೈ ರಚನೆಯಿಂದ ಕೂಡಿರುವ ಇದು ಭೇಟಿ ಭರ್ಜರಿಯಾಗಿ ಆಡುತ್ತದೆ ಎಂದು ವೈಜ್ನಾನಿಕವಾಗಿ ಹೇಳಲಾಗುತ್ತಿದೆ.
ಎಲ್ಫ್ ಗೂಬೆಯು ನೈರುತ್ಯ ಯುನೆಟೇಡ್ ಸ್ಟೇಟ್ಸ್ ಮತ್ತು ಮೆಕ್ಸಿಕೋ ಮರುಭೂಮಿಗಳಲ್ಲಿ ಬದುಕು ವಿಶೇಷ ಜಾತಿ ಗೂಬೆ ಇದಾಗಿದ್ದು, ಮರುಭೂಮಿಯ ಒಣ ಮತ್ತು ಮುಳ್ಳುಗಳಿಂದ ಕೂಡಿದ ಮರ ಅಥವಾ ಗಿಡಗಳಲ್ಲಿ ಗೂಡು ಕಟ್ಟಿ ವಾಸಿಸುತ್ತದೆ. ಅಲ್ಲದೆ ಪಾಪಸ್ಕಳ್ಳಿ ಮತ್ತು ಮರಗಳ ರಂಧ್ರಗಳನ್ನು ಹೆಚ್ಚಿನ ಸಮಯದಲ್ಲಿ ಗೂಡುಗಳನ್ನಾಗಿ ಪರಿವರ್ತಿಸಿ ಅದರಲ್ಲೆ ವಾಸ ಮಾಡುತ್ತದೆ.
ಎಲ್ಫ್ ಗೂಬೆಯು ಇದು ಪರವಾಲಂಬಿ ಆಗಿದ್ದು, ವಿವಿಧ ಕೀಟ ಸಣ್ಣ ಸಸ್ತನಿ ಮತ್ತು ಸರಿ ಸೃಪಗಳನ್ನು ಬೇಟೆಯಾಡುತ್ತದೆ. ಜಿರುಂಡೆ, ಮೀಡತೆ, ಪತಂಗ, ಸಿಕಾಡ ಮತ್ತು ಕಟ್ಟಿ ಕೀಟಗಳ ಜತೆಗೆ ಹಲ್ಲಿ ಮತ್ತು ಚೇಳುಗಳನ್ನು ತಮ್ಮ ಆಹಾರಕ್ಕಾಗಿ ಬೇಟೆಯಾಡುತ್ತದೆ. ವರ್ಷವಿಡಿ ಭೇಟಿಯಾಡುತ್ತದೆ. ಎಲ್ಫ್ ಗೂಬೆ ರಾತ್ರಿ ಸಮಯದಲ್ಲಿ ಭೇಟೆಯಾಡಿತ್ತದೆ. ಇದಲ್ಲೆ ಇದೇ ಸೂಕ್ತ ಸಮಯ ಎಂದು ಹೇಳಲಾಗುತ್ತದೆ.(ಏಜೆನ್ಸೀಸ್)