ಚೀನಾದಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌, 110 ಮೀಟರ್‌ ಓಟದ ಹರ್ಡಲ್ಸ್‌ ಜೋಡಸಿದ ವಿಡಿಯೋ ವೈರಲ್​​​​..!

hmixxx
Published on

19th Asian games: 2023 ನೇ ಸಾಲಿನ 19ನೇ ಏಷಿಯನ್​ ಗೇಮ್ಸ್​​ ಪಂದ್ಯಗಳು ಸೆಷ್ಟಂಬರ್​​ 28 ರಂದು ಪ್ರಾರಂಭವಾಗಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಈಗಾಗಲೇ ಪಂದ್ಯಾವಳಿಗಳು ಪ್ರಾರಂಭವಾಗಿದ್ದು, ಅಕ್ಟೋಬರ್ 8, 2023 ರಂದು ಮುಕ್ತಾಯಗೊಳ್ಳುತ್ತದೆ. ಈ ಪ್ರತಿಷ್ಠಿತ ಪಂದ್ಯಾವಳಿಯ ಕೆಲ ಈವೆಂಟ್​ಗಳಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಬಹ್ರೇನ್, ಬ್ರೂನಿ, ಕಾಂಬೋಡಿಯಾ, ಚೀನಾ ಮತ್ತು ಉತ್ತರ ಕೊರಿಯಾ ಸೇರಿದಂತೆ 45 ರಾಷ್ಟ್ರಗಳ ಕ್ರೀಡಾಪಟುಗಳು ಭಅಗಿಯಾಗಲಿದ್ದಾರೆ.


110 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಹರ್ಡಲ್ಸ್ ಅನ್ನು ಸರತಿ ಸಾಲಿನಲ್ಲಿ ಜೋಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.
ಏಷ್ಯನ್ ಗೇಮ್ಸ್ ಹ್ಯಾಂಗ್‌ಝೌ ಅಧಿಕೃತ ಎಕ್ಸ್​​(ಟ್ವಿಟ್ಟರ್​) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಪ್ರತಿಯೊಬ್ಬರೂ ಒಂದೇ ಬಾರಿ ಹರ್ಡಲ್ಸ್ ಹೊತ್ತೊಯ್ಯುತ್ತಿರುವುದ ನೋಡುಗರ ಹುಬ್ಬೇರಿಸಿದೆ.


ಎಕ್ಸ್​​​​ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ 110 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಹರ್ಡಲ್ಸ್ ಅನ್ನು ಹೇಗೆ ಇರಿಸಲಾಗಿದೆ? ಅನ್ನೋದನ್ನ ನೀವೂ ನೋಡಬೇಕೆ ಈ ವಿಡಿಯೋ ನೋಡಿ ಎಂದು ಪೋಸ್ಟ್​​​ನಲ್ಲಿ ಬರೆಯಲಾಗಿದೆ.


ಚೀನಾ, ಹಿಂದಿನ ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಐತಿಹಾಸಿಕ ಸಾಧನೆಯನ್ನು ಪ್ರತಿಬಿಂಬಿಸುವಲ್ಲಿ ಈ ವರ್ಷವೂ ತೊಡಗಿಕೊಂಡಿದೆ. ಐದು ವರ್ಷಗಳ ಹಿಂದೆ ಜಕಾರ್ತಾ ಕ್ರೀಡಾಕೂಟದಲ್ಲಿ ಚೀನಾ 132 ಚಿನ್ನದ ಪದಕಗಳನ್ನು ಮತ್ತು ಒಟ್ಟಾರೆ 287 ಪದಕಗಳನ್ನು ಗೆದ್ದುಕೊಂಡಿತ್ತು.


ಅಕ್ಟೋಬರ್ 2, 2023 ರಲ್ಲಿ ಈಗಾಗಲೆ ನಡೆದಿರುವ ಸ್ಪರ್ಧೆಗಳಲ್ಲಿ ಚೀನಾ ಒಟ್ಟು 141 ಚಿನ್ನ ಸೇರಿದಂತೆ 254 ಪದಕಗಳನ್ನು ಪಡೆದುಕೊಂಡಿದೆ.
ಭಾರತದಲ್ಲಿ, ಏಷ್ಯನ್ ಗೇಮ್ಸ್ ಅನ್ನು ವಿವಿಧ ಸೋನಿ ಸ್ಪೋರ್ಟ್ಸ್ ಚಾನೆಲ್‌ಗಳು ಮತ್ತು ಸೋನಿ ಲೈವ್​ನಲ್ಲಿ ಪ್ರಸಾರ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net