ಕೇವಲ 50 ರೂ.ಗೆ ಸಿನಿಮಾ ತೋರಿಸಿದೆ ಈ ಚಿತ್ರತಂಡ! ಮೊದಲ ಹಂತದಲ್ಲೇ ಹೊಸ ಪ್ರಯತ್ನಕ್ಕೆ ಸಿಕ್ತು ಗೆಲುವು

ವಿಜಯವಾಣಿ (40)
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದಲ್ಲಿ ಸದ್ಯ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ತೆರೆಗೆ ಅಪ್ಪಳಿಸುತ್ತಿದ್ದು, ಸ್ಟಾರ್​ ನಟರ ಸಿನಿಮಾಗಳ ನಡುವೆ ಹೊಸಬರ ಚಿತ್ರಗಳು ಕೂಡ ಸಖತ್​ ಕಮಾಲ್ ಮಾಡುತ್ತಿವೆ. ಸಿನಿಪ್ರೇಕ್ಷಕರ ಮನಗೆಲ್ಲುವುದಕ್ಕಿಂತಲೂ ಒಳ್ಳೆಯ ಕಂಟೇಟ್​ಗಳನ್ನು ಕೊಡುವುದರಲ್ಲಿ ಸದ್ಯ ಮುಂಚೂಣಿಯಲ್ಲಿದೆ. ಕ್ರೇಜಿ ಆ್ಯಂಟ್ಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಇವರಿಕಿ ಝೆಡೊಡುಡು' ಖ್ಯಾತಿಯ ರಾಕೇಶ್ ವರ್ರೆ ನಿರ್ಮಿಸಿದ 'ಪೇಕ ಮೇಡಲು' ಸಿನಿಮಾ ಸದ್ಯ ತೆಲುಗು ಚಿತ್ರರಸಿಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.

'ಗ್ಯಾಂಗ್ಸ್​ ಆಫ್​ ಗೋದಾವರಿ' ಚಿತ್ರದಲ್ಲಿ ನಟಿಸಿದ್ದ ನಟ ವಿನೋದ್ ಕಿಶನ್​ ಈ ಸಿನಿಮಾದಲ್ಲಿ ನಾಯಕ ನಟ. 'ಪೇಕ ಮೇಡಲು' ಮೂಲಕ ವಿನೋದ್​ ಹೀರೋ ಆಗಿ ಚಿತ್ರರಂಗಕ್ಕೆ ಲಾಂಚ್ ಆಗಿದ್ದಾರೆ. ಕಿಶನ್​ಗೆ ನಾಯಕಿಯಾಗಿ ಅನುಷಾ ಕೃಷ್ಣ ಮುಖ್ಯಭೂಮಿಕೆಯಲ್ಲಿ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್​ ನೋಡಗರ ಗಮನಸೆಳೆದಿದ್ದು, ಸಿನಿಮಾದ ಕಥೆ ಮಹಿಳಾ ಸಬಲೀಕರಣವನ್ನು ಆಧರಿಸಿದೆ ಎನ್ನಲಾಗಿದೆ. ಚಿತ್ರವು ಇದೇ ಜುಲೈ 19ಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ.

ತಮ್ಮ ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆಯಿಡುವ ಮುನ್ನ ಜನರಿಗೆ ಇದರ ಬಗ್ಗೆ ಮಾಹಿತಿ ದೊರೆಯಬೇಕು. ಚಿತ್ರದ ಕುರಿತು ಸಿನಿಪ್ರೇಕ್ಷಕರಲ್ಲಿ ಅರಿವು ಮೂಡಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್​, ಮಲ್ಟಿಪ್ಲೆಕ್ಸ್​ಗಳಿಗೆ ಪ್ರೇಕ್ಷಕರು ಆಗಮಿಸಬೇಕು ಎಂಬುದೇ ಆಯಾ ಚಿತ್ರತಂಡದ ದೊಡ್ಡ ಕನಸು. ಇದಕ್ಕಾಗಿ ಮಾಡುವ ಪ್ರಚಾರ ಕಸರತ್ತು ಒಂದೊಂದಲ್ಲ.

ಈ ಪೈಕಿ ತಮ್ಮ ಫಿಲಂ ಅನ್ನು ವಿಭಿನ್ನವಾಗಿ ಪ್ರಮೋಷನ್ ಮಾಡುವಲ್ಲಿ 'ಪೇಕ ಮೇಡಲು' ಚಿತ್ರದ ನಾಯಕ ಮತ್ತು ನಾಯಕಿ ಯಶಸ್ವಿಯಾಗಿದ್ದಾರೆ. ಪ್ರೇಕ್ಷಕರಿಗೆಂದೆ ಆಯೋಜಿಸಲಾಗಿದ್ದ ವಿಶೇಷ​ ಶೋಗಳಿಗೆ ಕೇವಲ 50 ರೂ. ನಿಗದಿಪಡಿಸಲಾಗಿತ್ತು. ಅದನ್ನು ತಾವು ಧರಿಸಿದ್ದ ಟೀ-ಶರ್ಟ್​ನಲ್ಲಿರುವ ಸ್ಕ್ಯಾನರ್​ನ ಸ್ಕ್ಯಾನ್​ ಮಾಡಿಕೊಳ್ಳುವ ಮೂಲಕ ಜನರು ಟಿಕೆಟ್ ಪಡೆಯಬಹುದಾಗಿತ್ತು. ಮೊದಲ ಹಂತದಲ್ಲೇ ಚಿತ್ರಕ್ಕೆ ಜಯ ಸಿಕ್ಕಿದ್ದು, ದೊಡ್ಡ ಗೆಲುವಿನತ್ತ ಚಿತ್ರತಂಡ ಎದುರುನೋಡುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net