ಪಪ್ಪಾ, ಕಾಕಾ ಎಂದು ಮಾತನಾಡುವ ಕಾಗೆ! ಮನುಷ್ಯನಂತೆ ಮಾತನಾಡುವ ಕಾಗೆ ವಿಡಿಯೋ ವೈರಲ್​ Crow Talks Like A Human

This Crow Talks Like A Human
Published on

Crow Talks Like A Human: ಸಾಕು ಗಿಳಿಗೆ ಪದಗಳನ್ನು ಕಲಿಸುವ ಮೂಲಕ, ಅದು ಮನುಷ್ಯನಂತೆ ಮಾತನಾಡಬಲ್ಲದು. ಮನುಷ್ಯನಂತೆ ಮಾತನಾಡಬಲ್ಲ ಏಕೈಕ ಹಕ್ಕಿ ಗಿಣಿ. ಆದರೆ ಕಾಗೆ ಕೂಡಾ ಮಾತಾಡುವುದನ್ನು ನೀವು ಕೇಳಿದರೆ ಖಂಡಿತವಾಗಿಯೂ ಆಶ್ಚರ್ಯ ಪಡುತ್ತೀರ.  ಇಲ್ಲೊಂದು ಕಾಗೆ ಮನುಷ್ಯರಂತೆ ಮರಾಠಿ ಭಾಷೆಯಲ್ಲಿ ಮಾತನಾಡುತ್ತಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಕಾಗೆ ಪಪ್ಪಾ, ಕಾಕಾ ಎಂದು ಹಾಗೂ ಇನ್ನು ಕೆಲವು ಮರಾಠೀ ಪದಗಳನ್ನು ಉಚ್ಚರಿಸುತ್ತಿರುವುದನ್ನು ವೀಡಿಯೋದಲ್ಲಿ  ಹೇಳುತ್ತಿರುವುದು ಕಂಡುಬರುತ್ತದೆ.

ಮಹಾರಾಷ್ಟ್ರದ ಪಾಲ್ಘರ್‌ನ ವಾಡಾ ತಾಲ್ಲೂಕಿನ ದೂರದ ಪ್ರದೇಶದಲ್ಲಿ ತನುಜಾ ಮುಕ್ನೆ ಎಂಬ ಮಹಿಳೆ ಈ ಕಾಗೆಯನ್ನು ಸಾಕಿದ್ದಾರೆ. ತನುಜಾ ಮೂರು ವರ್ಷಗಳ ಹಿಂದೆ ತನ್ನ ತೋಟದಿಂದ ಕಾಗೆಯನ್ನು ತಂದಳು. ಅವಳು ಕಾಗೆಗೆ ಆಹಾರ ಮತ್ತು ನೀರುಣಿಸುತ್ತಿದ್ದಳು. ಆ ಸಮಯದಲ್ಲಿ ಅದು ತನುಜಾಳ ಕುಟುಂಬ ಸದಸ್ಯರನ್ನು ಗಮನಿಸಿ ಮಾತನಾಡಲು ಕಲಿತಿತು.

ಕಾಗೆ ಮಾತನಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ. ಇದರೊಂದಿಗೆ, ನೆಟಿಜನ್‌ಗಳು ಕಾಗೆಯ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ. ಇದನ್ನು ಪ್ರಕೃತಿಯು ಒಂದು ಪವಾಡ ಎಂದು ವರ್ಣಿಸುತ್ತದೆ.

ಆದಾಗ್ಯೂ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ನಕಲಿ, ಕಾಗೆಯ ಮಾತುಗಳನ್ನು ಡಬ್ ಮಾಡುವ ಮೂಲಕ ವೀಡಿಯೊವನ್ನು ಮಾಡಲಾಗಿದೆ ಎಂದು  ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net