ಈ ಕರೊನಾ ವೈರಸ್​ ಹೆಚ್ಚೂಕಡಿಮೆ ಹತ್ತು ವರ್ಷ ಕಾಡುತ್ತಂತೆ, ಜಗತ್ತನ್ನೇ ಗುಡಿಸಿ ಹಾಕುತ್ತಂತೆ!

Kent
Published on

ನವದೆಹಲಿ: ಸುಮಾರು ಒಂದು ವರ್ಷದಿಂದ ಆತಂಕ ಹುಟ್ಟಿಸಿರುವ ಕರೊನಾ ಸೋಂಕು ಈಗೀಗ ತೀರಾ ಕಡಿಮೆಯಾಗಿದ್ದು, ಇನ್ನೇನು ಕರೊನಾತಂಕ ತಗ್ಗಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ ಎನ್ನುತ್ತಿರುವಾಗಲೇ ತೀರಾ ಆತಂಕಕ್ಕೆ ಈಡುಮಾಡುವಂಥ ಸುದ್ದಿಯೊಂದು ಹೊರಬಿದ್ದಿದೆ.

ಕರೊನಾ ವೈರಸ್​ನ ರೂಪಾಂತರಿಯ ಪೈಕಿ ಕೆಂಟ್​ ಎಂಬ ವರ್ಗದ ವೈರಸ್​ ಲಂಡನ್​ನಲ್ಲಿ ಕಾಣಿಸಿಕೊಂಡಿದ್ದು, ಇದು ಹೆಚ್ಚೂಕಡಿಮೆ ಹತ್ತು ವರ್ಷಗಳ ಕಾಡಲಿದೆ. ಮಾತ್ರವಲ್ಲ ಜಗತ್ತನ್ನೇ ಗುಡಿಸಿ ಹಾಕಲಿದೆ ಎಂಬ ಮಾಹಿತಿಯೊಂದು ಬಹಿರಂಗಗೊಂಡಿದೆ.

ಯುನೈಟೆಡ್​ ಕಿಂಗ್​ಡಮ್​ನ ಜೆನೆಟಿಕ್ ಸರ್ವೆಯಲೆನ್ಸ್ ಪ್ರೋಗ್ರಾಂ ಮುಖ್ಯಸ್ಥರೇ ಇಂಥದ್ದೊಂದು ಮಾಹಿತಿಯನ್ನು ನೀಡಿದ್ದಾರೆ. ಕರೊನಾದ ಕೆಂಟ್​ ವರ್ಗದ ವೈರಸ್​ ದೇಶವನ್ನೇ ಗುಡಿಸಿ ಹಾಕಿದ್ದು, ಅದು ಜಗತ್ತನ್ನೇ ಗುಡಿಸಿ ಹಾಕುವ ಸಾಧ್ಯತೆಗಳಿವೆ ಎಂದು ಕೋವಿಡ್​-19 ಜೀನೋಮಿಕ್ಸ್​ ಯಕೆ-ಕನ್ಸಾರ್ಟಿಯಂ ನಿರ್ದೇಶಕ ಶರೊನ್​ ಪೀಕಾಕ್​ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net