

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಆರಂಭವಾಗಿ ಏಳು ವಾರಗಳು ಕಳೆದಿದ್ದು, ಸ್ಫರ್ಧಿಗಳ ನಡುವಿನ ಕಿತ್ತಾಟ ಹಾಗೂ ವಿವಾದದಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಮನೆಯಿಂದ ಈಗಾಗಲೇ ಯಮುನಾ, ರಂಜಿತ್, ಜಗದೀಶ್, ಹಂಸಾ ಹಾಗೂ ಮಾನಸ ಎಲಿಮಿನೇಟ್ ಆಗಿದ್ದು, ಈ ವಾರವೂ ಕೂಡ ಎಲಿಮಿನೇಷನ್ (Elimination) ನಡೆಯಲಿದೆ. ಆದರೆ ಎಲಿಮಿನೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ಬಾಸ್ (Bigg Boss) ಕಾರ್ಯಕ್ರಮ ಸಖತ್ ಸೌಂಡ್ ಮಾಡುತ್ತಿದೆ.
ರಂಜಿತ್ ಹಾಗೂ ಜಗದೀಶ್ ಮನೆಯಿಂದ ನೇರವಾಗಿ ಎಲಿಮಿನೇಟ್ ಆದ ಬಳಿಕ ಗಾಯಕ ಹನುಮಂತು ವೈಲ್ಡ್ಕಾರ್ಡ್ ಸ್ಫರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ನಡೆದ ಟಾಸ್ಕ್ಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಹನುಮಂತು ಅವರು ಎರಡೆರಡು ಬಾರಿ ಕ್ಯಾಪ್ಟನ್ ಆಗಿದ್ದು, ಮನೆಯಲ್ಲಿರುವ ಇತರೆ ಸ್ಫರ್ಧಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ. ದಿನ ಕಳೆದಂತೆ ಹನುಮಂತು ಸ್ಟ್ರಾಂಗ್ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದು, ಇದರ ನಡುವೆಯೇ ಎಲಿಮಿನೇಷನ್ಗೆ ಸಂಬಂಧಿಸಿದ ವಿಚಾರ ಹೊರಬಂದಿದೆ.
ಅದರಂತೆ ಕಾರ್ಯಕ್ರಮ ಶುರುವಾಗಿ ಏಳು ವಾರಗಳಾಗಿದ್ದು, ಈ ವಾರ ಮನೆಯಿಂದ ನಟಿ ಅನುಷಾ ರೈ ಎಲಿಮಿನೇಟ್ ಆಗಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಸುದ್ದಿ ಮೂಲಗಳ ಪ್ರಕಾರ ಅತಿ ಕಡಿಮೆ ವೋಟ್ ಪಡೆದ ಕಾರಣ ಅನುಷಾ ರೈ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ವರದಿಯಾಗಿದ್ದು, ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಬೇಕಿದೆ.
ಅನುಷಾ, ಭವ್ಯ, ಮಂಜು, ಧನರಾಜ್, ಧರ್ಮ, ಗೌತಮಿ, ಹನುಮಂತ, ಮೋಕ್ಷಿತಾ, ಸುರೇಶ್ ಮತ್ತು ಶಿಶಿರ್ ಈ ವಾರದ ಎಲಿಮಿನೇಷನ್ ರೇಸ್‌ನಲ್ಲಿದ್ದರು. ಅದರಂತೆ ಸುರೇಶ್ ಹಾಗೂ ಮೋಕ್ಷಿತಾ ಶನಿವಾರದ ಸಂಚಿಕೆಯಲ್ಲಿ ಸೇವ್ ಆಗಿದ್ದಾರೆ. ಇನ್ನೂ ಈ ವಾರ ಮನೆಗೆ ಇಬ್ಬರು ಹೊಸ ಸ್ಫರ್ಧಿಗಳು ವೈಲ್ಡ್ಕಾರ್ಡ್ ಮೂಲಕ ಎಂಟ್ರಿಕೊಟ್ಟಿದ್ದು, ಕೇಳಿ ಬಂದಿರುವ ಮಾಹಿತಿ ಪ್ರಕಾರ ರಜತ್ ಹಾಗೂ ಶೋಭಾ ಶೆಟ್ಟಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ಧಾರೆ ಎಂದು ಹೇಳಲಾಗಿದ್ದು, ಇನ್ನಷ್ಟೇ ಅಧಿಕೃತವಾಗಬೇಕಿದೆ.