ಕೇವಲ ಒಂದೇ ಷರತ್ತು ಪಾಲಿಸಿದರೆ ಸಾಕು, ಈ ಕಂಪನಿಯಲ್ಲಿ ಪ್ರವಾಸ ಮಾಡುತ್ತಲೇ ಕೆಲಸ ಮಾಡಬಹುದಂತೆ!

Airbnb
Published on

ನವದೆಹಲಿ: ಸ್ಯಾನ್​ ಫ್ರಾನ್ಸಿಸ್ಕೋ ಮೂಲದ ಏರ್​ಬಿಎನ್​ಬಿ ಕಂಪನಿ ತನ್ನ ನೌಕರರಿಗೆ ಭರ್ಜರಿ ಗಿಫ್ಟ್​ ನೀಡಿದೆ.ನೀವು ಎಲ್ಲಿಂದ ಕೆಲಸ ಮಾಡಿದರೂ ಸರಿ, ಅದು ಮನೆಯಾಗಲೀ ಇಲ್ಲ ಬೇರೆ ಯಾವುದೇ ಪ್ರದೇಶದಲ್ಲಿದ್ದರೂ ಸರಿ ಈ ಸಂಸ್ಥೆಗೆ ಕೆಲಸ ಮಾಡಿಕೊಟ್ಟರಷ್ಟೇ ಸಾಕು. ಕಚೇರಿಗೆ ಬರಲೇಬೇಕೆಂಬ ನಿಯಮ ಇಲ್ಲ. 

ಹೌದು ನೌಕರರಿಗೆ ಕೆಲಸ ಮಾಡಲು ಉತ್ತೇಜಿಸುವ ಹಾಗೂ ಉತ್ತಮ ವಾತಾವರಣವನ್ನು ಒದಗಿಸಿಕೊಡುವ ದೃಷ್ಟಿಯಿಂದ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿಕೊಂಡಿದೆ.

ವಿಶ್ವದ 170 ದೇಶಗಳಲ್ಲಿ ಯಾವುದೇ ನಗರಗಳಿಂದಲೂ ಕೆಲಸ ಮಾಡಿಕೊಡಬಹುದು. ಪ್ರವಾಸ ಮಾಡುತ್ತಲೇ ನಗರಗಳನ್ನು ಸುತ್ತತ್ತಲೇ ಕೆಲಸ ಮಾಡಿಕೊಟ್ಟರೆ ಸಾಕು ಆದರೆ ಒಂದು ಷರತ್ತು ಮಾತ್ರ ಅನ್ವಯವಾಗಲಿದೆ. ಅದೇನೆಂದರೆ ಯಾವ ದೇಶದಲ್ಲಿ ಕೆಲಸ ಮಾಡುತ್ತಾರೋ ಅಲ್ಲಿನ ಶಾಶ್ವತ ವಿಳಾಸವನ್ನು ಕಂಪನಿಗೆ ಒಪ್ಪಿಸಬೇಕು ಎಂದು ಸಿಇಒ ಬ್ರೈನ್​ ಚೆಸ್ಕಿ ಹೇಳಿದ್ದಾರೆ.

ಈ ಕುರಿತು ತನ್ನ ನೌಕರರಿಗೆ ಇಮೇಲ್​ ಸಂದೇಶವನ್ನು ರವಾನಿಸಿದ್ದಾರೆ. ಕಚೇರಿಯಲ್ಲಿ ಒತ್ತಡವಿರುತ್ತದೆ. ಕೆಲಸವೂ ಕಡಿಮೆ ಆಗುತ್ತದೆ. ಅದೇ ಮನೆ ಅಥವಾ ಅವರಿಗೆ ಇಷ್ಟವಾದ ಸ್ಥಳದಿಂದಕೆಲಸ ಮಾಡಿದರೆ ಕೆಲಸದಲ್ಲಿ ಕಾರ್ಯಕ್ಷಮತೆ ಪಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ಸಂಸ್ಥೆಯಲ್ಲಿ 6 ಸಾವಿರಕ್ಕೂ ಅಧಿಕ ನೌಕರರು ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net