

ಮುಂಬೈ: ಹಿಂದಿ ಕಿರುತೆರೆಯ ಖ್ಯಾತ ನಟಿ ತಮಗಿರುವ ನೋವನ್ನು ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಾನು ಎಂದೂ ಮಗುವನ್ನು ಪಡೆಯಲು ಸಾಧ್ಯವಿಲ್ಲ. ಸಾಕಷ್ಟು ಬಾರಿ ಮಗುವಿಗಾಗಿ ಹಂಬಲಿಸಿದ್ದೇನೆ ಅದು ಸಾಧ್ಯವಾಗಿಲ್ಲ. ಅದಕ್ಕೆ ನನ್ನಲ್ಲೇ ತೊಂದರೆ ಇದೆ ಎಂದು ಹೇಳಿಕೊಂಡಿದ್ದಾರೆ.
ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಕಂಗನಾ ರಣಾವತ್ ನಡೆಸಿಕೊಡುತ್ತಿರುವ ಜನಪ್ರಿಯ ಶೋ ಲಾಕಪ್ ನಲ್ಲಿ ಕ್ಯಾಮೆರಾ ಮುಂದೆ ಕುಳಿತು ಅತ್ತಿರುವ ನಟಿ ಪಾಯಲ್ ರೊಹಟಗಿ ನಾನು ಬಂಜೆ,ನನಗೆ ಮಗು ಆಗುವುದಿಲ್ಲ ಎಂದು ಅತ್ತಿದ್ದಾರೆ.
ನಾಲ್ಕೈದು ವರ್ಷಗಳಿಂದ ತುಂಬಾ ಪ್ರಯತ್ನಿಸುತ್ತಿದ್ದೇವೆ. ಆದರೆ ನನಗೆ ಮಕ್ಕಳಾಗುವುದಿಲ್ಲ ಎಂದು ತಿಳಿದು ತುಂಬಾ ನೊಂದಿದ್ದೇನೆ ಎಂದು ಅವರು ದುಃಖ ತೋಡಿಕೊಂಡಿದ್ದಾರೆ. ಕಿರುತೆರೆ ನಟ ಆಗಿರುವ ಪತಿ ಸಂಗ್ರಾಮ್ ಸಿಂಗ್ಗೆ ಮಕ್ಕಳು ಎಂದರೇ ತುಂಬಾ ಇಷ್ಟ ಆದರೆ ಏನು ಮಾಡುವುದು ನನಗೆ ಮಕ್ಕಳೇ ಆಗುವುದಿಲ್ಲ ಎಂದು ತುಂಬಾ ನೋವಿನಿಂದ ನುಡಿದಿದ್ದಾರೆ.