ನಟ ಧನುಷ್​ ಮುಂದಿನ ಚಿತ್ರಕ್ಕೆ ಇವರೇ ನಾಯಕಿ?

Untitled design - 2023-08-01T112852.532
Published on

ತಮಿಳುನಾಡು: ಕಾಲಿವುಡ್​ ಚಿತ್ರರಂಗದ ಸ್ಟಾರ್​ ನಟ ಧನುಷ್​ ಅವರ ಮುಂಬರುವ ಚಿತ್ರಕ್ಕೆ ನಾಯಕಿಯಾಗಿ 'ಬುಟ್ಟ ಬೊಮ್ಮ' ಚಿತ್ರದ ಖ್ಯಾತಿಯ​ ಅನಿಖಾ ಸುರೇಂದ್ರನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಇದೀಗ ಚಿತ್ರರಂಗದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

'ಬುಟ್ಟ ಬೊಮ್ಮ' ಚಿತ್ರದ ಮೂಲಕ ಪರಿಪೂರ್ಣ ನಾಯಕಿಯಾಗಿ ಟಾಲಿವುಡ್​ನಲ್ಲಿ ಹೊರಹೊಮ್ಮಿದ ನಟಿ ಅನಿಖಾ ಸುರೇಂದ್ರನ್, ಈ ಹಿಂದೆ 'ಯೆನೈ ಅರಿಂದಾಲ್' ಮತ್ತು 'ವಿಶ್ವಾಸಂ' ಚಿತ್ರಗಳ ಪಾತ್ರಗಳಲ್ಲಿ ಅಭಿನಯಿಸುವ ಮುಖೇನ ಇದೀಗ ಸಿನಿಪ್ರಿಯರಿಗೆ ಮತ್ತಷ್ಟು ಚಿರಪರಿಚಿತ. ಸದ್ಯ ದುಲ್ಕರ್ ಸಲ್ಮಾನ್ ಅವರ 'ಕಿಂಗ್ ಆಫ್ ಕೋಥಾ'ದಲ್ಲಿ ಅಭಿನಯಿಸಿದ್ದು, ಈ ಚಿತ್ರ ಓಣಂ ಹಬ್ಬದಂದು ಬಿಡುಗಡೆಯಾಗಲು ಸಜ್ಜಾಗಿದೆ.

ಧನುಷ್ ಅವರ ಮುಂಬರುವ 'ಡಿ 50' (ತಾತ್ಕಾಲಿಕ ಟೈಟಲ್​) ಚಿತ್ರದಲ್ಲಿ ಅನಿಖಾ ಸುರೇಂದ್ರನ್​ ಮಹತ್ವದ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರ ಗ್ಯಾಂಗ್‌ಸ್ಟರ್ ಸಿನಿಮಾ ಎಂದು ತಿಳಿಸಿದ್ದು, ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.

ಸದ್ಯ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಲಿದೆ ಎಂದು ನಿರೀಕ್ಷಿಸಲಾಗಿದ್ದು, ಡಿ 50 ಸಿನಿಮಾದಲ್ಲಿ ಧನುಷ್ ಜತೆಗೆ ವಿಷ್ಣು ವಿಶಾಲ್ ಮತ್ತು ಎಸ್.ಜೆ. ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net