ಬೆಳ್ಳಂಬೆಳಗ್ಗೆ ಪಾಲಿಕೆ ಆಯುಕ್ತರ ಕಾರ್ಯಾಚರಣೆ; ಅಂಗಡಿಕಾರರಿಗೆ ಬಿಸಿ-ವಿಜಯವಾಣಿ ವರದಿಗೆ ಜನರ ಮೆಚ್ಚುಗೆ

IMG-20230801-WA0008.jpg
Published on


ಬೆಳಗಾವಿ:ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಕಿರಿಕಿರಿ ಉಂಟು ಮಾಡುತ್ತಿದ್ದ ರಸ್ತೆ ಬದಿಯ ಅಂಗಡಿಕಾರರಿಗೆ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ನೇತೃತ್ವದ ಅಧಿಕಾರಿಗಳ ತಂಡ ಬಿಸಿ ಮುಟ್ಟಿಸಿದೆ.
ಮಹಾನಗರ ಪಾಲಿಕೆ ಹಾಗೂ ದಂಡು ಮಂಡಳಿಯ ವ್ಯಾಪ್ತಿಯ ಪ್ರದೇಶದಲ್ಲಿ ರುವ ರಸ್ತೆ ಬದಿ ಅಂಗಡಿಗಳು, ತಳ್ಳು ಗಾಡಿ ವ್ಯಾಪಾರಿಗಳು ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಹೋಗುತ್ತಿದ್ದರು. ಇದು ಸಾರ್ವಜನಿಕ ರಿಗೆ, ಸ್ವಚ್ಚತಾ ಸಿಬ್ಬಂದಿಗೆ ನಿತ್ಯ ಕಿರಿಕಿರಿ ಉಂಟುಮಾಡುತ್ತಿದ್ದರು. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಮಂಗಳವಾರ ಸುದ್ದಿ ಪ್ರಕಟವಾಗಿತ್ತು. ಈ ಹಿನ್ನೆಲೆ  ಮಂಗಳವಾರ ಮಹಾನಗರ ಪಾಲಿಕೆ, ದಂಡು ಮಂಡಳಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಂಗಡಿಕಾರರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ,ಸ್ವಚ್ಚತೆ ಕಾಪಾಡದ ಅಂಗಡಿಕಾರರಿಗೆ ಪರವಾನಗಿ ರದ್ದು ಮಾಡುವ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net