

ಬೆಳಗಾವಿ: ವಿಷಾಹಾರ ಸೇವಿಸಿ 35ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಮೊದಕೊಪ್ಪ ಗ್ರಾಮದಲ್ಲಿ ನಡೆದಿದೆ.
ಯಲ್ಲಮ್ಮನ ಗುಡ್ಡ ಜಾತ್ರೆ ಮುಗಿಸಿ ಮರಳುವಾಗ ಆಹಾರ ಸೇವಿಸಿದ್ದು, ಒಂದೇ ಗ್ರಾಮದ 35ಕ್ಕೂ ಹೆಚ್ಚು ಜನರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಖಾನಾಪುರ ತಾಲೂಕು ಆಸ್ಪತ್ರೆಯಲ್ಲಿ 24ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಜಯಪುರ: ತಾನು ಬೆಳೆದಿದ್ದ ಬೆಳೆಯೆಲ್ಲಾ ಹಾಳಾಗಿ ಹೋಗಿದೆ ಎಂದು ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೋಹರ ಆಯತವಾಡ (55) ಆತ್ಮಹತ್ಯೆಗೆ ಶರಣಾದ ರೈತ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ರೈತ ಮನೋಹರ ಆಯತವಾಡಿ ತನ್ನ ತೋಟದ ಮನೆಯಲ್ಲಿ ವಿಷ ಸೇವಿಸಿದ್ದಾರೆ.
ರೈತ ಮನೋಹರ ಆಯತವಾಡಿ, ದ್ರಾಕ್ಷಿ ಬೆಳಗೆ ಸಿಂಪಡೆಣೆ ಮಾಡಲೆಂದು ಔಷಧ ತಂದಿದ್ದರು. ಎಡವಟ್ಟಾಗಿರುವುದ ಇಲ್ಲೇ. ಗೊಂದಲಕ್ಕೊಳಗಾಗಿ ತಪ್ಪು ಔಷಧ ಸಿಂಪರಣೆ ಮಾಡಿದ್ದಾರೆ. ಪರಿಣಾಮ ಕೈಗೆ ಸೇರಬೇಕಾಗಿದ್ದ ಫಲವತ್ತಾದ ಬೆಳೆ ಒಣಗಿ ಹೋಗಿದೆ.
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಕಲ್ಲಾಪುರದಲ್ಲಿ ರೈತ ರೇವಣ್ಣ ಎಂಬಾತ ಒಂದೂವರೆ ಎಕರೆ ಪ್ರದೇಶದಲ್ಲಿ ಸುಮಾರು 200ಕ್ಕೂ ಅಧಿಕ ಅಡಿಕೆ ಗಿಡಗಳನ್ನು ನೆಟ್ಟು ಕೃಷಿ ಮಾಡುತ್ತಿದ್ದ. ಆದರೆ ಅಟ್ಟಹಾಸ ಮೆರೆದ ದುಷ್ಕರ್ಮಿಗಳು ಅಷ್ಟೂ ಅಡಿಕೆ ಗಿಡಗಳನ್ನು ನಾಶ ಪಡಿಸಿದ್ದಾರೆ.
ನಿನ್ನೆ(ಫೆ.05) ರಾತ್ರಿ ರೇವಣ್ಣ ಕುಟುಂಬಸ್ಥರು ಜಾತ್ರೆಗೆ ತೆರಳಿದ್ದರು. ಇದೇ ಸಮಯವನ್ನು ನೋಡಿಕೊಂಡು ಬಂದ ದುಷ್ಕರ್ಮಿಗಳು ರೇವಣ್ಣ ನೆಟ್ಟಿದ್ದ ಅಡಿಕೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿದ್ದ 200ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಕಡಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.