

ನವದೆಹಲಿ: ಕೇಂದ್ರದಿಂದ ವಿವಿಧ ವಿಚಾರಗಳಲ್ಲಿ ಸಹಕಾರ ಸಿಗುತ್ತಿಲ್ಲ, "ಡಬಲ್ ಇಂಜಿನ್' ಕೆಲಸ ಮಾಡುತ್ತಿಲ್ಲ ಎಂಬ ಟೀಕೆಗೆ ಪೂರಕವಾಗಿ ಮತ್ತೊಂದು ಹಸಿಬಿಸಿ ಉದಾಹರಣೆ ಎದುರಾಗಿದೆ. ಕೇಂದ್ರ ಸರ್ಕಾರ 17 ರಾಜ್ಯಗಳಿಗೆ ಆದಾಯ ಕೊರತೆ ಅನುದಾನ ಬಿಡುಗಡೆ ಮಾಡಿದ್ದು, ಕರ್ನಾಟಕವನ್ನು ಕಡೆಗಣಿಸಿದೆ.
ಕರ್ನಾಟಕದಿಂದಲೇ ರಾಜ್ಯಸಭೆಗೆ ಆರಿಸಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರಾಜ್ಯದ ವಿಚಾರ ಬಂದಾಗ ನಿರ್ದಯಿಯಾಗಿರುವುದು ಪುನ@ ಸಾಬೀತಾಗಿದೆ. ಈಗ ಅನುದಾನ ಬಿಡುಗಡೆಯಲ್ಲೂ ರ್ನಿಲ$್ಯಸಿರುವುದು ಗೋಚರವಾಗಿದೆ.
ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ 17 ರಾಜ್ಯಗಳಿಗೆ 2021&22ನೇ ಸಾಲಿನ ಹಂಚಿಕೆ ನಂತರದ ಆದಾಯ ಕೊರತೆಯ (ಪಿಡಿಆರ್ಡಿ) 3ನೇ ತಿಂಗಳ ಕಂತು 9,871 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 135 ಕೋಟಿ ರೂ. ಮಾತ್ರ ಲಭ್ಯವಾಗಿದೆ. ಈ ಮೂರನೇ ಕಂತಿನ ಬಿಡುಗಡೆಯೊಂದಿಗೆ ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾದ ಹಂಚಿಕೆ ನಂತರದ ಆದಾಯ ಕೊರತೆಯ ಒಟ್ಟು ಮೊತ್ತ 29,613 ಕೋಟಿ ರೂ. ಆದಂತಾಗಿದೆ.
ಪೆಟ್ಟಿನ ಮೇಲೆ ಪೆಟ್ಟು: 14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಬರಬೇಕಾಗಿರುವ ಒಟ್ಟಾರೆ ತೆರಿಗೆ ಹಣ ಶೇ.4.71ರಷ್ಟಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪ್ರಮಾಣ ಶೇ. 3.63ಕ್ಕೆ ತಗ್ಗಿತ್ತು. ಇದರಿಂದ ಸರಾಸರಿ ವರ್ಷಕ್ಕೆ 11 ಸಾವಿರ ಕೋಟಿ ರೂ. ಕೇಂದ್ರದ ಪಾಲು ಕಡಿಮೆಯಾಗಲಿದೆ.
ಆದಾಯ ಕೊರತೆ: 15ನೇ ಹಣಕಾಸು ಆಯೋಗ ರಾಜ್ಯಗಳಿಗೆ ಅನುದಾನವನ್ನು ಪುನರ್ ಹಂಚಿಕೆ ಮಾಡಿದ ಬಳಿಕ ಕರ್ನಾಟಕಕ್ಕೆ ಆದಾಯ ಕೊರತೆಯಾಗುತ್ತದೆ ಎಂದು ಸ್ಪಷ್ಟಮಾಡಿಯೇ "ಆದಾಯ ಕೊರತೆ ಅನುದಾನ' ಬಿಡುಗಡೆಗೆ ಶಿಾರಸು ಮಾಡಿದೆ. ಆದರೆ, ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಅತೀ ಕನಿಷ್ಠ ಪ್ರಮಾಣದಲ್ಲಿ ನೆರವು ಪಡೆಯುತ್ತಿದೆ. ಕಳೆದ ಮೂರು ತಿಂಗಳಲ್ಲಿ (ಏಪ್ರಿಲ್&ಜೂನ್) ಕೇರಳ& 4972.74 ಕೋಟಿ ರೂ., ಆಂಧ್ರ& 4214.24 ಕೋಟಿ ರೂ., ಅಸ್ಸಾಂ& 1593.99 ಕೋಟಿ ರೂ., ಹಿಮಾಚಲ ಪ್ರದೇಶ& 2562.24 ಕೋಟಿ ರೂ., ಪಂಜಾಬ್& 2520.24 ಕೋಟಿ ರೂ., ರಾಜಸ್ಥಾನ& 2469.51 ಕೋಟಿ ರೂ., ಪಶ್ಚಿಮ ಬಂಗಾಳ 4401.75 ಕೋಟಿ ರೂ. ಪಡೆದುಕೊಂಡಿದೆ. ಕರ್ನಾಟಕಕ್ಕೆ ಸಿಕ್ಕಿದ್ದು ಕೇವಲ 407.76 ಕೋಟಿ ರೂ. ಮಾತ್ರ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪದ ಸರ್ಕಾರ ಇದ್ದರೆ ಸ್ವರ್ಗವನ್ನೇ ಇಳಿಸುತ್ತೇವೆಂದು ಆಡಳಿತ ಪ ಹೇಳಿಕೊಂಡಿತ್ತು. ಆದರೀಗ, ತದ್ವಿರುದ್ಧ ಬೆಳವಣಿಗೆ ನಡೆದು ಪ್ರತಿಪಕ್ಕೆ ಹಣಿಯಲು ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
1 ಕರ್ತವ್ಯದ ವೇಳೆ ಮಲಯಾಳಂನಲ್ಲಿ ಮಾತನಾಡ ಬಾರದು ಎಂದು ನರ್ಸ್ಗಳಿಗೆ ಸೂಚಿಸಿ ವಿವಾದಕ್ಕೆ ಕಾರಣವಾಗಿದ್ದ ದೆಹಲಿಯ ಜಿ.ಬಿ. ಪಂತ್ ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಆ ಬಗ್ಗೆ ಕ್ಷಮೆ ಕೋರಿ ಪತ್ರ ಬರೆದಿದ್ದಾರೆ.
2 "ಲಸಿಕೆ ಹಾಕಿಸಿಕೊಂಡಿರುವು ದರಿಂದ ನಾನು ದೇಶಪ್ರೇಮಿ' ಎನ್ನುವ ಬ್ಯಾಡ್ಜ್ ಅನ್ನು ಮಧ್ಯಪ್ರದೇಶದ ನಿವಾರಿ ಪೊಲೀಸರು ಪಿನ್ ಮಾಡುತ್ತಿದ್ದಾರೆ.
3 ಕರೊನಾ ವಿರುದ್ಧದ ಸರ್ಕಾರದ ಹೋರಾಟ "ಸರ್ಜಿಕಲ್ ಸ್ಟ್ರೆ$ಕ್'ನಂತೆ ಇರಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಕೋವಿಡ್ ಲಸಿಕೆ ಸರ್ಟಿಫಿಕೆಟ್ ದೋಷ ತಿದ್ದಲು ಅವಕಾಶ
ಕೋವಿಡ್&19 ಲಸಿಕೆ ಹಾಕಿಸಿಕೊಂಡ ಲಾನುಭವಿಗಳಿಗೆ ನೀಡಲಾಗುವ ಸರ್ಟಿಫಿಕೆಟ್ಗಳು ದೋಷರಹಿತವಾಗಿರುವುದನ್ನು ಖಾತರಿಪಡಿಸಲು ಕೋವಿನ್ ಪೋರ್ಟಲ್ನಲ್ಲಿ "ರೇಯ್ಸ್ ಆ್ಯನ್ ಇಶ್ಶೂ' ಎಂಬ ಹೊಸ ಫೀಚರ್ಅನ್ನು ಅಳವಡಿಸಲಾಗಿದೆ. ಸರ್ಟಿಫಿಕೆಟ್ನಲ್ಲಿ ಕಣ್ತಪ್ಪಿನಿಂದ ಆಗಿರಬಹುದಾದ ದೋಷಗಳನ್ನು ಲಾನುಭವಿಗಳೇ ಸರಿಪಡಿಸಲು ಇದು ನೆರವಾಗುತ್ತದೆ. ಹೆಸರು, ಜನ್ಮ ದಿನಾಂಕ, ಲಿಂಗ ಮುಂತಾದ ವಿವರಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಡಿಡಿಡಿ.್ಚಟಡಿಜ್ಞಿ.ಜಟಡ.ಜ್ಞಿ ಈ ವಿಳಾಸಕ್ಕೆ ಭೇಟಿ ನೀಡಿ "ರೇಯ್ಸ್ ಆ್ಯನ್ ಇಶ್ಶೂ' ಆಯ್ಕೆಯನ್ನು ಕ್ಲಿಕ್ಕಿಸಿ ತಿದ್ದುಪಡಿಗಳನ್ನು ದಾಖಲಿಸ ಬಹುದಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
2&ಡಿಜಿ ಉತ್ಪಾದನೆಗೆ ಡಿಆರ್ಡಿಒ ಅರ್ಜಿ ಆಹ್ವಾನ
ಕರೊನಾ ಚಿಕಿತ್ಸೆಗೆ ತಾನು ಅಭಿವೃದ್ಧಿ ಪಡಿಸಿರುವ 2&ಡಿಜಿ ಔಷಧದ ಬೃಹತ್ ಪ್ರಮಾಣದ ಉತ್ಪಾದನೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅರ್ಜಿ ಆಹ್ವಾನಿಸಿದೆ. ಔಷಧದ ತಂತ್ರಜ್ಞಾನ ವರ್ಗಾವಣೆಗಾಗಿ ಭಾರತೀಯ ಔಷಧ ಕಂಪನಿಗಳು ಆಸಕ್ತಿ ಪತ್ರ (ಎಕ್ಸ್ಪ್ರೆಷನ್ ಆ್ ಇಂಟರೆಸ್ಟ್) ಕಳಿಸಬೇಕೆಂದು ಅದು ಸೂಚಿಸಿದೆ. ಇಮೇಲ್ ಮೂಲಕ ಅರ್ಜಿ ಕಳಿಸಲು ಜೂನ್ 17 ಕೊನೆ ದಿನ. ಕಂಪನಿಗಳ ಸಾಮರ್ಥ್ಯ ಅನುಸರಿಸಿ ಕೇವಲ 15 ಸಂಸ್ಥೆಗಳಿಗೆ ಮಾತ್ರ ತಂತ್ರಜ್ಞಾನ ವರ್ಗಾಯಿಸಲು ನಿರ್ಧರಿಸಲಾಗಿದೆ.
ಬೀಟಾ, ಡೆಲ್ಟಾ ಪ್ರಭೇದಕ್ಕೆ ಕೊವ್ಯಾಕ್ಸಿನ್ ರಾಮಬಾಣ
ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ, ಕರೊನಾ ವೈರಸ್ನ ಬೀಟಾ ಮತ್ತು ಡೆಲ್ಟಾ ಪ್ರಭೇದಗಳ ವಿರುದ್ಧ ತುಂಬಾ ಪರಿಣಾಮಕಾರಿ ಎಂಬುದು ಜಂಟಿ ಅಧ್ಯಯನದಿಂದ ತಿಳಿದು ಬಂದಿದೆ. ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್ಐವಿ), ಭಾರತೀಯ ವೈದ್ಯಕಿಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಭಾರತ್ ಬಯೋಟೆಕ್ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಕೋವಿಡ್ನಿಂದ ಗುಣಮುಖರಾದ 20 ಜನರು ಮತ್ತು ಕೊವ್ಯಾಕ್ಸಿನ್ನ ಎರಡೂ ಡೋಸ್ ಪಡೆದ ಇತರ 17 ಮಂದಿಯಿಂದ ಪಡೆದ ಮಾದರಿಗಳ ಆಧಾರದಲ್ಲಿ ಈ ಅಧ್ಯಯನ ನಡೆಸಲಾಗಿತ್ತು. ಐಸಿಎಂಆರ್ ನಿರ್ದೇಶಕ ಬಲರಾಂ ಭಾರ್ಗವ ಅವರೂ ಅಧ್ಯಯನ ವರದಿ ಸಿದ್ಧಪಡಿಸಿದವರಲ್ಲಿ ಇದ್ದಾರೆ. ಡೆಲ್ಟಾ ಪ್ರಭೇದ (ಬಿ.1.617.2) ಮೊದಲಿಗೆ ಭಾರತದಲ್ಲಿ ಪತ್ತೆಯಾಗಿತ್ತು. ಅದುವೇ ದೇಶದಲ್ಲಿ ಎರಡನೇ ಅಲೆಯ ತೀವ್ರತೆಗೆ ಕಾರಣ ಎಂದು ಹೇಳಲಾಗುತ್ತಿದೆ. ಬೀಟಾ ರೂಪಾಂತರಿ (ಬಿ.1.351) ಮೊದಲಿಗೆ ದಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು.