

ನವದೆಹಲಿ: ಇಲ್ಲಿನ ಆರು ಶಾಲೆಗಳಲ್ಲಿ ಬಾಂಬ್(Bomb) ಇರುವುದಾಗಿ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ವಾರದೊಳಗೆ ದೆಹಲಿ ಶಾಲೆಗಳಿಗೆ ಬಾಂಬ್ ಕರೆ ಬರುತ್ತಿರುವುದು ಇದು ಮೂರನೇ ಸಲ ಎಂದು ಎಂದು ವರದಿಯಾಗಿದೆ.
ಆರು ಶಾಲೆಗಳ ಪೈಕಿ ಒಂದು ಶಾಲೆಯ ತಮ್ಮದೇ ಸ್ಕೂಲ್ ವಿದ್ಯಾರ್ಥಿ ಈ ಕೆಲಸ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ವಿದ್ಯಾರ್ಥಿಯನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಮಗು ತಪ್ಪು ಒಪ್ಪಿಕೊಂಡಿದೆ. ವಿದ್ಯಾರ್ಥಿಗೆ ಕೌನ್ಸಿಲಿಂಗ್ ಮಾಡಲಾಗಿದೆ. ಇತನ ವರ್ತನೆ ಬಗ್ಗೆ ನಿಗಾ ಇಡುವಂತೆ ಪಾಲಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪ್ಲಬ್ಲಿಕ್ ಸ್ಕೂಲ್, ಆರ್.ಕೆ.ಪುರಂನ ಶಾಲೆಗಳಿಗೆ ಶನಿವಾರ ಬೆಳಗ್ಗೆ 6.30ಕ್ಕೆ ಇಮೇಲ್ ಮೂಲಕ ಕರೆ ಮಾಡಿರುವುದಾಗಿ ಆಗ್ನಿಶಾಮಕದಳು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಗ್ನಿ ಶಾಮಕದಳ, ಸ್ಥಳೀಯ ಪೊಲೀಸರು, ಶ್ವಾನದಳ, ಬಾಂಬ್ ಪತ್ತೆ ತಂಡಗಳು ಶಾಲೆಗೆ ಆಗಮಿಸಿ ಶೋಧ ಕಾರ್ಯಚರಣೆ ಮುಂದುವರೆಸಿವೆ. ಆದರೆ, ಶೋಧದಲ್ಲಿ ಯಾವುದೇ ಅನುಮಾನಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
''ನಮ್ಮನ್ನು ತಡೆಯುವ ನಿಮ್ಮ ಪ್ರಯತ್ನ ವಿಫಲವಾಗಲಿದೆ. ಪ್ರವಾದಿ ಮೊಹಮ್ಮದ್, ಮಕ್ಕಳನ್ನು ಅಲ್ಲಾಹುವಿನ ಪವಿತ್ರಾ ಜ್ವಾಲೆಯಲ್ಲಿ ಸುಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕರೆ ಬಂದಿರುವ ಇಮೇಲ್ ನಲ್ಲಿ ಉಲ್ಲೇಖಿಸಲಾಗಿದೆ'' ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
''ಶನಿವಾರದಂದು ಮಕ್ಕಳಿಲ್ಲದ ಸಮಯದಲ್ಲಿ ನಿಮ್ಮ ಶಾಲೆಗಳನ್ನು ನೆಲಸಮ ಮಾಡುವುದಾಗಿ, ನಮ್ಮ ಬಾಂಬ್ ಇಡುವ ವಸ್ತ್ರಾಧಿಗಳನ್ನು ಪ್ರವಾದಿ ಮೊಹಮ್ಮದ್ ಆರ್ಶಿರ್ವಾದಿಸಿದ್ದಾರೆ. ಅವರು ನಮ್ಮ ಕಾರ್ಯವನ್ನು ವಿಫಲಗೊಳಿಸುವುದಿಲ್ಲ. ನಮ್ಮ ಮಕ್ಕಳು ಅಲ್ಲಾಹುನ ಧೈರ್ಯಶಾಲಿ ಸೇವಕರು. ಇವರು ಈ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ'' ಎಂದು ಉಲ್ಲೇಖಿಸಲಾಗಿದೆ,(ಏಜೆನ್ಸೀಸ್).