ಮೇಕೆ ಕದಿಯಲು ಬಂದವರು ಬೈಕ್​ ಕಳಕೊಂಡ್ರು..!

goat
Published on

ಧಾರವಾಡ: ಪರರ ವಸ್ತು ಪಾಶಾಣ ಎಂಬ ಮಾತಿದೆ. ಈ ಕಿಲಾಡಿಗಳಿಗೆ ಇದು ಈಗ ನಿಜ ಎನಿಸಿರಬೇಕು. ಮೇಕೆ ಕದಿಯಲು ಬಂದ ಇಬ್ಬರು ಈಗ ಬೈಕ್​ ಕಳೆದುಕೊಂಡಿದ್ದಾರೆ.

ಮೇಕೆ ಕಳ್ಳತನಕ್ಕೆ ಬಂದ ಕಳ್ಳರು ಬೈಕ್ ಬಿಟ್ಟು ಓಡಿದ ಘಟನೆ ಧಾರವಾಡ ತಾಲೂಕಿನ ಸಿಂಗನಹಳ್ಳಿಯಲ್ಲಿ ನಡೆದಿದೆ. ಈ ಮೇಕೆಗಳು ಬೀಬಿಜಾನ್ ಹಣಸಿ ಎಂಬುವವರಿಗೆ ಸೇರಿದ್ದವು. ನಸುಕಿನ ಜಾವ ಇಬ್ಬರು ಬೈಕ್ ಮೇಲೆ ಬಂದಿದ್ದು ಮೇಕೆ ಹೊತ್ತೊಯ್ಯಲು ಒ್ರಯತ್ನಿಸಿದ್ದಾರೆ. ಮೇಕೆ ಹೊತ್ತೊಯ್ಯುವುದನ್ನು ಗಮನಿಸಿದ ನಾಯಿಗಳು ಬೊಗಳಿವೆ.

ನಾಯಿ ಸದ್ದು ಕೇಳಿದ ಮನೆಯವರು ಎಚ್ಚರಗೊಂಡಿದ್ದು ಏನು ಎಂದು ನೋಡಲು ಹೊರಬಂದಿದ್ದಾರೆ. ಮನೆಯವರು ಎದ್ದು ಬಂದಿದ್ದರಿಂದ ತಬ್ಬಿಬ್ಬಾದ ಕಳ್ಳರು ಮೇಕೆಯನ್ನು ಹಾಗೂ ಬೈಕ್​ಅನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ವಿಚಿತ್ರ ಎಂದರೆ ಇಬ್ಬರೂ ಬೇರೆ ಬೇರೆ ದಿಕ್ಕಿನಲ್ಲಿ ಓಡಿ ಹೋಗಿದ್ದಾರೆ. ಈಗ ಮೇಕೆಯೂ ಇಲ್ಲದೇ, ತಂದಿದ್ದ ಬೈಕ್​ ಕುಡ ಕಳೆದುಕೊಂಡು ತಲೆ ಮೇಲೆ ಟವೆಲ್​ ಹಾಕುವ ಪರಿಸ್ಥಿತಿಯಲ್ಲಿ ಕಳ್ಳರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net