ಶೋರೂಮ್​​ಗೆ ನುಗ್ಗಿ ಹಣಕ್ಕೆ ಒತ್ತಾಯಿಸಿದ ಕಳ್ಳರು; ಖತರ್ನಾಕ್​​ ಖದೀಮರ ಕೈಚಳಕ CCTVಯಲ್ಲಿ ಸರೆ

CCTV (1)
Published on

ನವದೆಹಲಿ: ಮೂವರು ಗ್ಯಾಂಗ್ ​ಸ್ಟಾರ್​ಗಳು ಏಕಾಏಕಿ ಶೋ ರೂಮ್​ಗೆ ನುಗ್ಗಿ ಗಾಳಿಯಲ್ಲಿ ಹಲವು ಬಾರಿ ಗುಂಡು ಹಾರಿಸಿ, ಮಾಲೀಕನನ್ನು ಬೆದರಿಸಿ ಹೊರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಹಗಲಿನಲ್ಲೇ ಧೈರ್ಯವಾಗಿ ಸುಲಿಗೆಗೆ ಯತ್ನಿಸಿದ ಈ ಪ್ರಕರಣ ಸಿಸಿ(CCTV) ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರನ್ನು ಕೂಡ ಚಕಿತಗೊಳಿಸಿದೆ.

3 ದರೋಡೆಕೊರರು ಏಕಾಏಕಿ ಶೋರೂಮ್​ಗೆ ನುಗ್ಗಿ ಮಾಲೀಕನಿಗೆ ಚೀಟಿಕೊಟ್ಟಿದ್ದಾರೆ. ಚೀಟಿಯಲ್ಲಿ ಬರೆದ ಮೊತ್ತ ಮನೆಗೆ ತರುವಂತೆ ಬೆದರಿಕೆ ಹಾಕಿ, ಗನ್​ ಮೂಲಕ ಆನೇಕ ಬಾರಿ ಗುಂಡು ಹಾರಿಸಿ, ಧೈರ್ಯದಿಂದ ಹೊರ ನಡೆದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

2021 ರಲ್ಲಿ ರೋಹಿಣಿ ನ್ಯಾಯಾಲಯದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ದರೋಡೆಕೋರ ಜಿತೇಂದ್ರ ಗೋಗಿ ಕಡೆಯವರು ಈ ಶೂಟರ್​ಗಳು ಎಂದು ಗುರುತಿಸಲಾಗಿದೆ. ಜಿತೇಂದ್ರ ಗೋಗಿ ಸಹಾಯಕ ದೀಪಕ್ ಬಾಕ್ಸರ್ ಈಗ ಗ್ಯಾಂಗ್‌ನ ಮುಖ್ಯಸ್ಥರಾಗಿದ್ದಾರೆ. ಈ ಗ್ಯಾಂಗ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನೊಂದಿಗೂ ಸಂಪರ್ಕ ಹೊಂದಿದೆ ಎನ್ನಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ದೆಹಲಿಯ ನಂಗ್ಲೋಯ್ ಮತ್ತು ಅಲಿಪುರದಲ್ಲಿ ಇತ್ತೀಚಿಗೆ ಇದೇ ತರಹದ ಎರಡು ಗುಂಡಿನ ಘಟನೆಗಳು ಸಂಭವಿಸಿವೆ. ಈ ಪ್ರಕರಣದಲ್ಲಿ ಗೋಗಿ ಗ್ಯಾಂಗ್ ಹೆಸರು ಕೇಳಿಬಂದಿತ್ತು. ಈ ಘಟನೆಗಳನ್ನು ಪೊಲೀಸ್​ ಇಲಾಖೆ ಸಾವಲಾಗಿ ತಗೆದುಕೊಂಡಿದೆ. ಘಟನಾ ಸ್ಥಳಕ್ಕೆ ಪೊಲೀಸ್ ತಂಡ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಯತ್ನಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net