

ಭೋಪಾಲ್: ಆಶ್ಚರ್ಯಕರ ಘಟನೆ ಒಂದರಲ್ಲಿ ನಾಲ್ಕು ಜನರ ಕಳ್ಳರ ಗುಂಪೊಂದು ಉಪ್ಪನ್ನು ಕದಿಯಲು 10 ಲಕ್ಷ ರೂ. ಮೌಲ್ಯದ ಎಸ್ಯುವಿಯಲ್ಲಿ ಬಂದಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಲಹರ್ ಕಸ್ಬಾ ಪ್ರದೇಶದಲ್ಲಿರುವ ಮಾರುಕಟ್ಟೆಯ ಅಂಗಡಿ ಒಂದರಲ್ಲಿ ನಡೆದಿದೆ.
ಸದ್ಯ ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ನಾಲ್ವರು ಯುವಕರು ಮಾತನಾಡುತ್ತಿರುವುದು ಕಂಡು ಬರುತ್ತದೆ. ಬಳಿಕ ವ್ಯಕ್ತಿ ಓರ್ವ ಮುರು ಮೂಟೆ ಉಪ್ಪನ್ನು ಕಾರಿನ ಡಿಕ್ಕಿಯೊಳಗೆ ನಿಧಾನವಾಗಿ ಇಡುತ್ತಿರುವುದು ಕಂಡು ಬರುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು ಕುಡಿದ ಮತ್ತಿನಲ್ಲಿ ಯುವಕರು ಈ ರೀತಿ ಮಾಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟರೆ. ಇದು ಓವರ್ ಸ್ಟಾರ್ಟ್ನೆಸ್ಗಾಗಿ ಮಾಡುತ್ತಿರುವುವಂತೆ ಭಾಸವಾಗುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.